×
Ad

ಹಣ ಚೆಲುವೆ ಪ್ರಕರಣ: ದಿಲ್ಲಿಯ ವಕೀಲ ಟಂಡನ್ ಬಂಧನ

Update: 2016-12-29 19:51 IST

ಹೊಸದಿಲ್ಲಿ, ಡಿ.29: ಹಣ ಚೆಲುವೆ ಪ್ರಕರಣದ ತನಿಖೆಯೊಂದರ ಸಂಬಂಧ ವಿವಾದಾತ್ಮಕ ವಕೀಲ ರೋಹಿತ್ ಟಂಡನ್ ಎಂಬಾತನನ್ನು ಜಾರಿ ನಿರ್ದೇಶನಾಲಯವಿಂದು ಬಂಧಿಸಿದೆ. ನೋಟು ರದ್ದತಿಯ ಬಳಿಕ ಕಪ್ಪು ಹಣ ನಿಗ್ರಹ ಕಾರ್ಯಾಚರಣೆಯ ಅಂಗವಾಗಿ ಪೊಲೀಸರು ಕಾನೂನು ಸಂಸ್ಥೆಯೊಂದರ ಆವರಣಗಳಿಗೆ ದಾಳಿ ನಡೆಸಿ ರೂ.13.6 ಕೋಟಿ ವಶಪಡಿಸಿಕೊಂಡಿದ್ದರು.

ಕಳೆದ ಕೆಲವು ದಿನಗಳಿಂದ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದ್ದ ಟಂಡನ್‌ನನ್ನು ಹಣ ಚೆಲುವೆ ತಡೆ ಕಾಯ್ದೆಯ(ಪಿಎಂಎಲ್‌ಎ) ಪ್ರಸ್ತಾವಗಳನ್ವಯ ನಿನ್ನೆ ರಾತ್ರಿ ಬಂಧಿಸಲಾಯಿತು. ಮುಂದಿನ ಕಸ್ಟಡಿಗಾಗಿ ಆತನನ್ನು ಇಲ್ಲಿನ ನ್ಯಾಯಾಲಯವೊಂದಕ್ಕೆ ಹಾಜರುಪಡಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಲ್ಕತಾದ ವ್ಯಾಪಾರಿ ಪಾರಸ್‌ಮಲ್ ಲೋಧಾ ಹಾಗೂ ಕೋಟಕ್ ಬ್ಯಾಂಕ್‌ನ ಬಂಧಿತ ಪ್ರಬಂಧಕ ಆಶಿಷ್ ಕುಮಾರ್ ಎಂಬವರೊಂದಿಗೆ ಸೇರಿ ರೂ. 60 ಕೋಟಿಯಷ್ಟು ಮೊತ್ತದ ನಿಷೇಧಿತ ನೋಟುಗಳನ್ನು ಹೊಸದರೊಂದಿಗೆ ಪರಿವರ್ತಿಸುವಲ್ಲಿ ಟಂಡನ್ ಪ್ರಮುಖ ಪಾತ್ರ ವಹಿಸಿದ್ದಾನೆಂದು ತನಿಖೆ ಸಂಸ್ಥೆ ಶಂಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News