×
Ad

ಪೇಟಿಎಂ ಎದುರು 'ಬೀಮ್ ' ನನ್ನು ತಂದ ಪ್ರಧಾನಿ ಮೋದಿ

Update: 2016-12-30 17:18 IST

ಹೊಸದಿಲ್ಲಿ,ಡಿ.30: ಇಲ್ಲಿಯ ತಾಲ್‌ಕಟೋರಾ ಸ್ಟೇಡಿಯಮ್‌ನಲ್ಲಿ ಇಂದು ನಡೆದ ಡಿಜಿ ಧನ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಧಾರ ಆಧರಿತ ಮೊಬೈಲ್ ಪಾವತಿ ಆ್ಯಪ್ ‘ಬೀಮ್ ’ಗೆ ಚಾಲನೆ ನೀಡಿದರು. ಬೀಮ್(ಭಾರತ್ ಇಂಟರ್‌ಫೇಸ್ ಫಾರ್ ಮನಿ) ಹೊಸ ಹೆಸರಿನ, ಯುಪಿಐ ಮತ್ತು ಯುಎಸ್‌ಎಸ್‌ಡಿಗಳ ಪರಿಷ್ಕೃತ ಆವೃತ್ತಿಯಾಗಿದೆ.

ಲಕಿ ಗ್ರಾಹಕ್ ಯೋಜನಾದ ವಿಜೇತರನ್ನೂ ಮೋದಿ ಅಭಿನಂದಿಸಿದರು. ಬೀಮ್ ಆ್ಯಪ್‌ಗೆ ಚಾಲನೆ ನೀಡಿದ ಬಳಿಕ ಅದನ್ನು ಬಳಸಿ ಖಾದಿ ಖರೀದಿಗೆ ಹಣವನ್ನು ಪಾವತಿಸಿದರು.

ನೂತನ ಆ್ಯಪ್ ವಹಿವಾಟುಗಳಲ್ಲಿ ಪ್ಲಾಸ್ಟಿಕ್ ಕಾರ್ಡ್‌ಗಳು ಮತ್ತು ನಗದು ರಹಿತ ಸಮಾಜಕ್ಕಾಗಿ ಅತ್ಯಗತ್ಯವೆಂದು ಒಮ್ಮೆ ಭಾವಿಸಲಾಗಿದ್ದ ಪಾಯಿಂಟ್ ಆಫ್ ಸೇಲ್(ಪಿಒಎಸ್) ಯಂತ್ರಗಳ ಪಾತ್ರವನ್ನು ಕಡಿಮೆಗೊಳಿಸುವ ನಿರೀಕ್ಷೆಯಿದೆ.

ಮಾಸ್ಟರ್ ಕಾರ್ಡ್ ಅಥವಾ ವಿಸಾದಂತಹ ಕಾರ್ಡ್ ಕಂಪನಿಗಳು ಶುಲ್ಕ ವಿಧಿಸುತ್ತಿರುವುದು ವ್ಯಾಪಾರಿಗಳು ಡಿಜಿಟಲ್ ವಹಿವಾಟಿನತ್ತ ಮುಖ ಮಾಡಲು ಹಿಂಜರಿಯುವಂತೆ ಮಾಡಿದ್ದು, ಬೀಮ್ ಆ್ಯಪ್ ಇಂತಹ ಶುಲ್ಕ ಪಾವತಿಯ ಹೊರೆಯನ್ನು ನಿವಾರಿಸಲಿದೆ. ಹೀಗಾಗಿ ಕುಗ್ರಾಮಗಳಲ್ಲಿಯ ವ್ಯಾಪಾರಿಗಳೂ ಡಿಜಿಟಲ್ ವಹಿವಾಟು ನಡೆಸುವುದು ಸುಲಭವಾಗಲಿದೆ. ಈ ಆ್ಯಪ್ ಬಳಸಿ ವಹಿವಾಟು ನಡೆಸಲು ವ್ಯಾಪಾರಿಯ ಬಳಿ ಆ್ಯಂಡ್ರಾಯ್ಡಾ ಫೋನ್‌ವೊಂದಿದ್ದರೆ ಸಾಕು.

ಆ್ಯಪ್ ಹೇಗೆ ಕೆಲಸ ಮಾಡುತ್ತದೆ?
ವ್ಯಾಪಾರಿಗಳು ಬಯೊಮೆಟ್ರಿಕ್ ರೀಡರ್‌ನೊಂದಿಗೆ ಸಂಪರ್ಕ ಹೊಂದಿರುವ ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಆಧಾರ ಕ್ಯಾಷಲೆಸ್ ಮರ್ಚಂಟ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಬಯೊಮೆಟ್ರಿಕ್ ರೀಡರ್ 2,000 ರೂ.ಗೆ ಲಭ್ಯವಿದೆ. ಗ್ರಾಹಕರು ತಮ್ಮ ಆಧಾರ ಸಂಖ್ಯೆಯನ್ನು ಆ್ಯಫ್‌ಗೆ ಫೀಡ್ ಮಾಡಿ ತಮ್ಮ  ಬ್ಯಾಂಕ್‌ನ್ನು ಆಯ್ಕೆ ಮಾಡಬೇಕು. ವಹಿವಾಟನ್ನು ದೃಢಪಡಿಸುವಲ್ಲಿ ಬಯೊಮೆಟ್ರಿಕ್ ಸ್ಕಾನ್ ಪಾಸ್‌ವರ್ಡ್‌ನಂತೆ ಕೆಲಸ ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News