×
Ad

ಚಿಟ್‌ಫಂಡ್ ಹಗರಣ: ಟಿಎಂಸಿ ನಾಯಕನ ಬಂಧನ

Update: 2016-12-30 18:47 IST

ಕೋಲ್ಕತಾ, ಡಿ.30: ಚಿಟ್‌ಫಂಡ್ ಹಗರಣವೊಂದರ ಸಂಬಂಧ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ ತಪಸ್ ಪಾಲ್‌ರನ್ನು ಕೋಲ್ಕತಾದಿಂದ ಬಂಧಿಸಲಾಗಿದೆ.

ಬಂಧನಕ್ಕೆ ಮೊದಲು ಸಿಬಿಐ ಹಲವು ತಾಸುಗಳ ಕಾಲ ಅವರ ವಿಚಾರಣೆ ನಡೆಸಿತ್ತು.

ಪಾಲ್, ರೋಸ್ ವ್ಯಾಲಿ ಹೆಸರಿನ ಪಾಂಜಿ ಕಂಪೆನಿಯ ನಿರ್ದೇಶಕರಾಗಿದ್ದರು. ಕಂಪೆನಿಯು ಸಾವಿರಾರು ಹೂಡಿಕೆದಾರರಿಗೆ ರೂ.17 ಕೋಟಿಗಳಷ್ಟು ಪಂಗನಾಮ ಹಾಕಿದೆಯೆಂದು ಆರೋಪಿಸಲಾಗಿದೆ.

ಪಾಲ್, ರೋಸ್ ವ್ಯಾಲಿಯಿಂದ ಲಾಭ ಪಡೆದಿದ್ದಾರೆಂಬ ಶಂಕೆಯಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಬ್ಬ ಟಿಎಂಸಿ ನಾಯಕ ಸುದೀಪ್ ಬಂದೋಪಾಧ್ಯಾಯರಿಗೂ ಪ್ರಕರಣದ ಸಂಬಂಧ ಸಮನ್ಸ್ ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News