ಹಳೆ ನೋಟು ಬಳಕೆ ನಿಷೇಧ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ
Update: 2016-12-30 20:13 IST
ಹೊಸದಿಲ್ಲಿ.ಡಿ.30: ಐನೂರು ಮತ್ತು ಸಾವಿರ ರೂ.ಗಳ ಹಳೆ ನೋಟು ಬಳಕೆ ನಿಷೇಧ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಇಂದು ಅಂಕಿತ ಹಾಕಿದ್ದಾರೆ.
ಇದರೊಂದಿಗೆ ಇನ್ನು ಮುಂದೆ ನಿಷೇಧಿತ ಐನೂರು ಮತ್ತು ಸಾವಿರ ರೂ.ಗಳ ನೋಟುಗಳನ್ನು 10ಕ್ಕಿಂತ ಹೆಚ್ಚು ಇಟ್ಟುಕೊಳ್ಳುವಂತಿಲ್ಲ. ಹಳೆ ನೋಟುಗಳನ್ನು ಇಟ್ಟುಕೊಂಡರೆ 50 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿದೆ.