×
Ad

ನಾಳೆ ಸಮಾಜವಾದಿ ಪಕ್ಷದ ಶಾಸಕರ ಸಭೆ ಕರೆದ ಅಖಿಲೇಶ್

Update: 2016-12-30 21:14 IST

ಲಕ್ನೋ, ಡಿ.30: ಸಮಾಜವಾದಿ ಪಕ್ಷದಿಂದ ಆರು ವರ್ಷಗಳ ಅವಧಿಗೆ ಉಚ್ಛಾಟನೆಗೊಂಡಿರುವ ಮುಖ್ಯ ಮಂತ್ರಿ ಅಖಿಲೇಶ್‌ ಯಾದವ್ ಮುಂದಿನ ನಿಲುವನ್ನು ಚರ್ಚಿಸಲು ಶನಿವಾರ ಬೆಳಗ್ಗೆ 9 ಗಂಟೆಗೆ ತನ್ನ ನಿವಾಸದಲ್ಲಿ  ಪಕ್ಷದ ಶಾಸಕರ ಸಭೆ ಕರೆದಿದ್ದಾರೆ.
ಸಮಾಜವಾದಿ ಪಕ್ಷದಿಂದ ಅಖಿಲೇಶ್‌ ಯಾದವ್‌ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದನ್ನು ವಿರೋಧಿಸಿ ಅವರ ಬೆಂಬಲಿಗರು ಪಕ್ಷದ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News