ಅಮಾನ್ಯಗೊಂಡ ಸಾಮಾನ್ಯರ ಬದುಕು!

Update: 2016-12-31 18:33 GMT

ದಲಿತ ಚಳವಳಿಯ ಕಿಡಿ ಹಚ್ಚಿದ ರೋಹಿತ್ ವೇಮುಲಾ ಆತ್ಮಹತ್ಯೆ

ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದ ರೋಹಿತ್ ಚಕ್ರವರ್ತಿ ವೇಮುಲಾ 2016 ಜನವರಿ 17ರಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾರೀ ವಿವಾದಕ್ಕೆ ಕಾರಣವಾಯಿತು. ದೇಶಾದ್ಯಂತ ಅಕ್ಷರಶಃ ಮಲಗಿದ್ದ ದಲಿತ ಹೋರಾಟಗಾರರನ್ನು ಮತ್ತೆ ಎಚ್ಚರಿಸಿದ್ದು ವೇಮುಲಾ ಆತ್ಮಹತ್ಯೆ. ಮುಂದೆ ಅಂದು ಜೆಎನ್‌ಯುವಿನ ಕನ್ಹಯ್ಯೆ ಹೋರಾಟದೊಂದಿಗೆ ತಳಕು ಹಾಕಿ ಕೊಂಡಿತು. ಗುಜರಾತ್‌ಲ್ಲಿ ಊನ ಚಳವಳಿಗೆ ನಾಂದಿ ಹಾಡಿತು. ಕರ್ನಾಟಕದಲ್ಲೂ ಉಡುಪಿ ಚಲೋಗೆ ಬೆಳಕು ನೀಡಿತು.

ದಲಿತ ಹೋರಾಟಗಾರನೆಂಬ ಕಾರಣದಿಂದ ಹೈದರಾಬಾದ್ ವಿವಿಯ ಕುಲಪತಿಗಳ ಸಹಿತ ರಾಜಕೀಯ ವ್ಯವಸ್ಥೆ ವೇಮುಲಾ ಅವರನ್ನು ಶೋಷಣೆ ಮಾಡಿತು. ಅವರ ಸ್ಕಾಲರ್ ಶಿಪ್‌ನ್ನು ತಡೆ ಹಿಡಿಯಿತು. ಹಾಸ್ಟೆಲ್‌ನಿಂದ ಹೊರಹಾಕಿತು. ಈ ಹಿನ್ನೆಲೆಯಲ್ಲಿ ಅವರು ಹಲವು ದಿನಗಳ ಕಾಲ ಹಾಸ್ಟೆಲ್ ಅಂಗಳದಲ್ಲೇ ಅಂಬೇಡ್ಕರ್ ಭಾವಚಿತ್ರದ ಜೊತೆಗೆ ರಾತ್ರಿ ಹಗಲು ಪ್ರತಿಭಟನೆ ನಡೆಸುತ್ತಿದ್ದರು. ಅಂತಿಮ ವಾಗಿ ತನ್ನ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಅವರು ಆತ್ಮಹತ್ಯೆ ಮಾಡಿಕೊಂಡರು. ವೇಮುಲಾ ಆತ್ಮಹತ್ಯೆ ದೇಶದಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಆಕ್ರೋಶಕ್ಕೆ ಕಾರಣವಾಯಿತು. ದಲಿತ ವರ್ಗಕ್ಕೆ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳ ವಿರುದ್ಧ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ತಾರತಮ್ಯದ ನೀತಿ ಅನುಸರಿಸಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಖಂಡನೆ ವ್ಯಕ್ತವಾಯಿತು. ವಿದ್ಯಾರ್ಥಿಗಳ ದೂರಿನ ಮೇರೆಗೆ ದತ್ತಾತ್ರೇಯ, ಸಿಕಂದರಾಬಾದ್‌ನ ಬಿಜೆಪಿ ಸಂಸದ, ಕೇಂದ್ರ ಸರಕಾರದ ಉದ್ಯೋಗ ಮತ್ತು ಕಾರ್ಮಿಕ ಸಚಿವಾಲಯ, ಬಿಜೆಪಿಯ ವಿಧಾನಪರಿಷತ್ ಶಾಸಕ ರಾಮಚಂದ್ರ ರಾವ್, ಹೈದರಾಬಾದ್ ವಿವಿಯ ಉಪಕುಲಪತಿ ಅಪ್ಪಾರಾವ್ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸ್ ಕೇಸು ದಾಖಲಾಯಿತು.

ಹೊಸ ಯುವನಾಯಕ ಕನ್ಹಯ್ಯೆ ಹುಟ್ಟು

 ಈ ವರ್ಷ ಅತ್ಯಂತ ಹೆಚ್ಚು ಪ್ರಚಲಿತವಿದ್ದ ಹೆಸರೆಂದರೆ ಅದು ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ(ಜೆಎನ್‌ಯು) ಮತ್ತು ಅದರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್. ರೋಹಿತ್ ವೇಮುಲಾ ಹೋರಾಟ ಮತ್ತೆ ಕಾವು ಪಡೆದದ್ದು ಜೆಎನ್‌ಯುವಿನಲ್ಲಿ ಕನ್ಹಯ್ಯೆ ಮೂಲಕ. ವೇಮುಲಾ ಪರವಾಗಿ ತೀವ್ರವಾದ ಧ್ವನಿಯೆತ್ತಿದ್ದೂ ಜೆಎನ್‌ಯು. ಇದರ ಅಂತಿಮ ಪರಿಣಾಮ ಕನ್ಹಯ್ಯಿ ಮತ್ತು ಆತನ ಗೆಳೆಯರು ದೇಶದ್ರೋಹದ ಆರೋಪದಲ್ಲಿ ಜೈಲು ಸೇರಬೇಕಾಯಿತು.

ಅಫ್ಝಲ್‌ಗುರು ನೇಣಿಗೇರಿದ ದಿನ ಜೆಎನ್‌ಯುವಿನಲ್ಲಿ ನಡೆದ ಸಭೆಯೊಂದರಲ್ಲಿ ಕನ್ಹಯ್ಯ ಮತ್ತು ಗೆಳೆಯರು ದೇಶದ್ರೋಹದ ಘೋಷಣೆಕೂಗಿದರು ಎಂದು ಆರೋಪಿಸಿ ಅವರನ್ನು ಜೈಲಿಗೆ ತಳ್ಳಲಾಯಿತು. ನ್ಯಾಯಾಲಯದಲ್ಲೂ ಕನ್ಹಯ್ಯಾನ ಮೇಲೆ ಸಂಘಪರಿವಾರಕ್ಕೆ ಸೇರಿದ ವಕೀಲರ ಗುಂಪೊಂದು ಹಲ್ಲೆ ನಡೆಸಿತು. ಕನ್ನಡ ಪ್ರಕರಣದಲ್ಲಿ ಎಡಪಕ್ಷ ಮೊದಲ ಬಾರಿಗೆ ಬಹಿರಂಗವಾಗಿ ಅಂಬೇಡ್ಕರ್ ಮತ್ತು ದಲಿತರನ್ನು ಜೊತೆಗೂಡಿಸಿ ಬೀದಿಗಿಳಿಯಿತು. ಜೈಭೀಮ್ ಘೋಷಣೆಯನ್ನು ಕನ್ಹಯ್ಯೆ ಜೈಭೀಮ್ ಮತ್ತು ಲಾಲ್ ಸಲಾಂ ಘೋಷಣೆಯನ್ನು ಒಂದಾಗಿಸಿದರು. ನೀಲಿ ಮತ್ತು ಕೆಂಪು ಇವುಗಳ ಜೊತೆಗಾರಿಕೆಯಲ್ಲಿ ಹೋರಾಟವೊಂದು ಜೆಎನ್‌ಯುವಿನಲ್ಲಿ ರೂಪುಗೊಂಡಿತು. ಅದು ದಿಲ್ಲಿಯಾಚೆಗೆ ದೇಶಾದ್ಯಂತ ವಿಸ್ತರಿಸಿತು.

ಲೆಯಿತ್ತಿದ ಉನಾ ಚಳವಳಿ

ಒಂದೆಡೆ ಗೋರಕ್ಷಣೆಯ ಹೆಸರಲ್ಲಿ ಗೋರಕ್ಷಕರ ಅಟ್ಟಹಾಸ ದೇಶಾದ್ಯಂತ ತೀವ್ರಗೊಂಡ ಸಂದರ್ಭದಲ್ಲಿ ಅದರ ವಿರುದ್ಧ ಅಷ್ಟೇ ತೀವ್ರವಾದ ಪ್ರತಿಭಟನೆ ಕೇಳಿ ಬಂದುದು ಗುಜರಾತ್‌ನಲ್ಲಿ. ಗೋರಕ್ಷಕರಿಂದ ಗುಜರಾತ್‌ನ ದಲಿತರ ಮೇಲೆ ನಡೆದ ಬರ್ಬರ ಹಲ್ಲೆ ಒಂದು ಚಳವಳಿಯನ್ನೇ ಹುಟ್ಟು ಹಾಕಿತು. ಮುಂದೆ ಅದು ಉನಾ ಚಳವಳಿಯಾಗಿ ಹೆಸರು ಪಡೆಯಿತು. ಈ ಚಳವಳಿಯ ಮೂಲಕ, ದಲಿತರಿಗೆ ಒಬ್ಬ ಯುವ ನಾಯಕ ದೊರಕಿತ. ಆತನೆ ಜಿಗ್ನೇಶ್ ಮೆವಾನಿ. ಮುಂದೆ ಈತನ ನೇತೃತ್ವದಲ್ಲಿ ದೇಶಾದ್ಯಂತ ಚಳವಳಿಗಳು ನಡೆದವು. ಉಡುಪಿ ಚಲೋ ಚಳವಳಿಯಲ್ಲೂ ಮೆವಾಮಿ ಪ್ರಧಾನ ಆಕರ್ಷಣೆಯಾಗಿದ್ದರು. ಗುಜರಾತ್‌ನಲ್ಲಿ ಗೋವುಗಳ ಅವಶೇಷಗಳನ್ನು ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಎಸೆಯುವ ಮೂಲಕ ‘ನಿಮ್ಮ ಗೋವುಗಳನ್ನು ನೀವೇ ಸಂಸ್ಕಾರ ಮಾಡಿ’ ಎಂದು ದಲಿತರು ಕರೆ ನೀಡಿದರು. ಇದು ಬಿಜೆಪಿ ಮತ್ತು ಸಂಘಪರಿವಾರಕ್ಕೆ ಬಹುದೊಡ್ಡ ಆಘಾತವಾಗಿತ್ತು. ದಲಿತರ ಮೇಲಿನ ದೌರ್ಜನ್ಯ ಘಟನೆಯಿಂದ ತೀವ್ರ ಮನನೊಂದ ಸುಮಾರು ಸಾವಿರಕ್ಕೂ ಹೆಚ್ಚು ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಅಷ್ಟೇ ಅಲ್ಲ ಉನಾದಲ್ಲಿ ದಲಿತರ ಭಾರೀ ಸಮಾವೇಶವೊಂದು ನಡೆದು, ದೇಶದ ಗಮನ ಅತ್ತ ಕಡೆ ಹರಿಯಿತು.

ರಾಷ್ಟ್ರಗೀತೆಯ ಪ್ರಹಸನ

ಜನರಲ್ಲಿ ದೇಶಭಕ್ತಿ ಮತ್ತು ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸಲು ಡಿ.1ರಿಂದ ದೇಶದ ಎಲ್ಲಾ ಸಿನೆಮಾ ಮಂದಿರಗಳಲ್ಲೂ ಪ್ರದರ್ಶನ ಆರಂಭಕ್ಕೂ ಮುನ್ನ ಕಡ್ಡಾಯವಾಗಿ ರಾಷ್ಟ್ರಗೀತೆ ಪ್ರಸಾರ ಮಾಡಬೇಕು ಎಂದು ಸುಪ್ರೀಂಕೋರ್ಟ್‌ನ ವಿವಾದಾತ್ಮಕ ಆದೇಶ ತೀವ್ರ ಚರ್ಚೆಗೊಳಗಾಯಿತು. ಅಲ್ಲದೆ ರಾಷ್ಟ್ರಗೀತೆ ಪ್ರಸಾರ ಆಗುವ ವೇಳೆ ಜನರು ಎದ್ದುನಿಂತು ಗೌರವ ಸೂಚಿಸಬೇಕು ಮತ್ತು ಅತ್ತಿತ್ತ ಅಡ್ಡಾಡುವುದನ್ನು ತಪ್ಪಿಸಲು ಥಿಯೇಟರ್‌ನ ಬಾಗಿಲು ಮುಚ್ಚುವಂತೆಯೂ ಆದೇಶದಲ್ಲಿ ಸೂಚಿಸಲಾಗಿತ್ತು. ಹಲವು ಕಾನೂನು ತಜ್ಞರು, ಚಿಂತಕರು ಈ ಆದೇಶವನ್ನು ಲೇವಡಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ, ನ್ಯಾಯಾಲಯದಲ್ಲೂ ಕಲಾಪ ಆರಂಭಕ್ಕೆ ಮುನ್ನ ರಾಷ್ಟ್ರಗೀತೆಯನ್ನು ಹಾಡಬೇಕು ಎಂಬ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು ತಮಾಷೆಯಾಗಿದೆ. ನ್ಯಾಯಾಲಯಕ್ಕೆಲ್ಲ ಈ ಆದೇಶವನ್ನು ಅನ್ವಯಿಸಬಾರದು ಎಂದು ಸುಪ್ರೀಂಕೋರ್ಟ್ ನುಣುಚುವಿಕೆಯ ತೀರ್ಪನ್ನು ನೀಡಿತು. ಆದೇಶ ಹೊರ ಬಿದ್ದಂತೆಯೇ ಸಿನೆಮಾ ಮಂದಿರಗಳೂ ‘ರಾಷ್ಟ್ರಭಕ್ತ’ರ ದೇಶಭಕ್ತಿಯ ಪ್ರದರ್ಶನಕ್ಕೆ ವೇದಿಕೆಯಾಗಿಬಿಟ್ಟಿತು. ಗೋವಾದ ಥಿಯೇಟರ್ ಒಂದರಲ್ಲಿ ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದ ಸಂದರ್ಭ ಎದ್ದು ನಿಲ್ಲಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಲಾಯಿತು. ತಾನು ಅಂಗವಿಕಲ, ಎದ್ದು ನಿಲ್ಲಲು ಅಶಕ್ತನಾಗಿದ್ದೇನೆ ಎಂದು ಆತ ಅವಲತ್ತುಕೊಂಡರೂ ಕೇಳಲು ಯಾರಿಗೂ ವ್ಯವಧಾನವಿರಲಿಲ್ಲ. ಈ ಘಟನೆಯ ಬಳಿಕ ಎಚ್ಚೆತ್ತುಕೊಂಡ ಸುಪ್ರೀಂಕೋರ್ಟ್, ಅಂಗವಿಕಲ ಮತ್ತು ದೈಹಿಕ ನ್ಯೂನತೆ ಇರುವ ವ್ಯಕ್ತಿಗಳಿಗೆ ನಿಯಮದಿಂದ ಕೆಲವು ವಿನಾಯಿತಿ ನೀಡಿತು.

ಸ್ಮತಿ ಇರಾನಿ ನಕಲಿ ಪದವಿ ಪ್ರಮಾಣ ಪತ್ರ ಪ್ರಕರಣ

ಕೇಂದ್ರದ ಮಾನವ ಸಂಪನ್ಮೂಲ ಸಚಿವೆಯಾಗಿದ್ದ ಸ್ಮತಿ ಇರಾನಿ ಅವರು ನಕಲಿ ಪದವಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂಬ ಪ್ರಕರಣ ಭಾರೀ ವಿವಾದಕ್ಕೆ ಕಾರಣವಾಯಿತು. ಸ್ಮತಿ ಇರಾನಿ ಅವರು 2004, 2011 ಮತ್ತು 2014ರ ಚುನಾವಣೆ ವೇಳೆ ತನ್ನ ವಿದ್ಯಾರ್ಹತೆ ಬಗ್ಗೆ ಚುನಾವಣಾ ಆಯೋಗಕ್ಕೆ ಉದ್ದೇಶಪೂರ್ವಕವಾಗಿ ಅಸಮಂಜಸ ದಾಖಲೆಗಳನ್ನು ಸಲ್ಲಿಸಿದ್ದಾರೆ. ಸುಳ್ಳು ದಾಖಲೆ ಒದಗಿಸುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು ಈ ಬಗ್ಗೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹವ್ಯಾಸೀ ಪತ್ರಕರ್ತ ಅಹ್ಮದ್ ಖಾನ್ ಎಂಬವರು ಪಟಿಯಾಲಾ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಆದರೆ ಅರ್ಜಿದಾರರು ಸೂಕ್ತ ದಾಖಲೆ ಪತ್ರ ಸಲ್ಲಿಸಲು ವಿಫಲರಾಗಿದ್ದಾರೆ ಎಂಬ ಕಾರಣ ನೀಡಿ ಈ ಪ್ರಕರಣವನ್ನು ಹೈಕೋರ್ಟ್ ತಳ್ಳಿಹಾಕಿತ್ತು.

ಅಮ್ಮನ ಜಾಗದಲ್ಲಿ ಚಿಕ್ಕಮ್ಮ

ದಕ್ಷಿಣ ಭಾರತದ ರಾಜಕೀಯ ಚರಿತ್ರೆಯನ್ನೇ ಅಲುಗಾಡಿಸುವಂತೆ ಮಾಡಿರುವುದು ಜಯಲಲಿತಾ ನಿಧನ. ಒಂದೆಡೆ ನೋಟು ನಿಷೇಧದ ಹೊಡೆತದಿಂದ ಜನತೆ ತತ್ತರಿಸಿರುವಾಗಲೇ ಜಯಲಲಿತಾ ನಿಧನ ತಮಿಳುನಾಡಿನ ಜನರಿಗೆ ದೊಡ್ಡ ಆಘಾತವಾಗಿತ್ತು. ಜಯಲಲಿತಾ ಆಸ್ಪತ್ರೆಗೆ ದಾಖಲಾದ ದಿನದಿಂದಲೂ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಗೌಪ್ಯತೆ ಕಾಯ್ದುಕೊಳ್ಳಲಾಗಿತ್ತು. ಜಯ ಗುಣಮುಖರಾಗುತ್ತಿದ್ದಾರೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿಕೆ ನೀಡುತ್ತಾ ಬಂದಿದ್ದವು. ಜಯಾ ನಿಧನದ ಬಳಿಕ ಒ.ಪನ್ನೀರಸೆಲಂ್ವ ತಾತ್ಕಾಲಿಕ ಮುಖ್ಯಮಂತ್ರಿಯಾಗಿ ನೇಮಕವಾದರೂ, ಜಯಾ ಆಪ್ತೆ ಶಶಿಕಲಾ ಅವರನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳಿಸುವ ಮೂಲಕ ಮುಂದಿನ ಮುಖ್ಯಮಂತ್ರಿಯಾಗಿಸುವ ಸೂಚನೆ ನೀಡಲಾಗಿದೆ.

ಯುಮಾಲಿನ್ಯದಿಂದ ಕಂಗೆಟ್ಟ ದಿಲ್ಲಿ

ರಾಜಧಾನಿ ದಿಲ್ಲಿ ತೀವ್ರ ವಾಯುಮಾಲಿನ್ಯ ಸಮಸ್ಯೆಯಿಂದ ಕಂಗೆಟ್ಟಿತು. ವಾಯುಮಾಲಿನ್ಯ ಮಟ್ಟ ಅಪಾಯದ ಮಟ್ಟ ಮೀರಿದಾಗ ದಿಲ್ಲಿಯಲ್ಲಿ ವಾಹನ ಸಂಚಾರಕ್ಕೆ ಕೆಲವೊಂದು ನಿರ್ಬಂಧ ಹೇರಲಾಯಿತು. ಸಮ-ಬೆಸ ನಿಯಮ ಜಾರಿಗೆ ಬಂದಿತು. ಒಂದು ದಿನ ಸಮ ನೋಂದಣಿ ಸಂಖ್ಯೆಯ ವಾಹನಗಳಿಗೆ ಸಂಚಾರಕ್ಕೆ ಅನುಮತಿ, ಇನ್ನೊಂದು ದಿನ ಬೆಸ ನೋಂದಣಿ ಸಂಖ್ಯೆಯ ವಾಹನಕ್ಕೆ ಸಂಚಾರಕ್ಕೆ ಅನುಮತಿ ನೀಡಲಾಯಿತು. ಕೇಜ್ರಿವಾಲ್ ಸರಕಾರದ ಈ ಕ್ರಮಕ್ಕೆ ಭಾರೀ ಟೀಕೆ ಎದುರಾದರೂ ಇದರಿಂದ ವಾಯುಮಾಲಿನ್ಯ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರವಾದದ್ದಂತೂ ಸತ್ಯ. ಅಲ್ಲದೆ ರಾಜಧಾನಿಯಲ್ಲಿ ಕಸದ ರಾಶಿಯನ್ನು ಸುಡುವುದಕ್ಕೆ ನಿಷೇಧ, ಭತ್ತ ಮತ್ತಿತರ ಧಾನ್ಯಗಳ ತ್ಯಾಜ್ಯದ ರಾಶಿಯನ್ನು ಸುಡುವುದನ್ನು ನಿಷೇಧಿಸಲಾಯಿತು.

ಉತ್ತರಾಖಂಡದ ಮುಖಭಂಗ

ಮೋದಿ ನೇತೃತ್ವದ ಕೇಂದ್ರ ಸರಕಾರ ಉಳಿದ ರಾಜ್ಯ ಸರಕಾರಗಳನ್ನು ಉರುಳಿಸಲು ತನ್ನ ಅಧಿಕಾರವನ್ನು ದುರುಪಯೋಗಗೊಳಿಸುತ್ತಿದೆ ಎನ್ನುವುದಕ್ಕೆ ಉತ್ತರಾಖಂಡ ಸ್ಪಷ್ಟ ನಿದರ್ಶನವಾಯಿತು. ಉತ್ತರಾಖಂಡದಲ್ಲಿ ಕೆಲವು ಶಾಸಕರನ್ನು ತನ್ನೆಡೆಗೆ ಸೆಳೆದುದಲ್ಲದೆ, ಯಾವ ಕಾರಣವೂ ಇಲ್ಲದೆ ಅಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿತು. ಆ ಮೂಲಕ ಜನರ ಆಯ್ಕೆಯ ಸರಕಾರವನ್ನು ಸರ್ವಾಧಿಕಾರದ ಮೂಲಕ ದಮನಿಸಲು ಯತ್ನಿಸಿತು. ಆದರೆ ನ್ಯಾಯಾಲಯದ ಕಣ್ಗಾವಲು ಉತ್ತರ ಪ್ರದೇಶದಲ್ಲಿ ಪ್ರಜಾಸತ್ತೆಯನ್ನು ಕಾಪಾಡಿತು. ಹೈಕೋರ್ಟ್ ಕೇಂದ್ರ ನಿರ್ಧಾರವನ್ನು ತಿರಸ್ಕರಿಸಿತು. ಬಿಜೆಪಿಯ ಕಡೆಗೆ ಒಲಿದ ಶಾಸಕರನ್ನು ಸುಪ್ರೀಂಕೋರ್ಟ್ ಅನರ್ಹಗೊಳಿಸಿತು ಮಾತ್ರವಲ್ಲ, ಕಾಂಗ್ರೆಸ್ ಸರಕಾರಕ್ಕೆ ಬಹುಮತ ಸಾಬೀತು ಮಾಡಲು ಅವಕಾಶ ನೀಡಿತು. ಕೊನೆಗೂ ಬಿಜೆಪಿ ತಾನು ಹೇರಿದ ರಾಷ್ಟ್ರಪತಿ ಆಡಳಿತವನ್ನು ಹಿಂದೆಗೆಯಬೇಕಾಯಿತು. ಕಾಂಗ್ರೆಸ್ ಸರಕಾರ ಬಹುಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಯಿತು. ಉತ್ತರಾಖಂಡದ ಬೆಳವಣಿಗೆ ಕೇಂದ್ರದ ಮೋದಿ ಸರಕಾರಕ್ಕೆ ಆಗಿರುವ ಬಹುದೊಡ್ಡ ಮುಖಭಂಗವಾಗಿತ್ತು.

ಅತಂತ್ರ ಅರುಣಾಚಲ

ಉತ್ತರಾಖಂಡದಲ್ಲಿ ಕೇಂದ್ರ ಸರಕಾರ ಏನನ್ನು ನಡೆಸಿತೋ ಅಂತಹದೊಂದು ಪ್ರಯತ್ನವನ್ನೂ ಈ ಮೊದಲು ಅರುಣಾಚಲ ಪ್ರದೇಶದಲ್ಲೂ ನಡೆಸಲು ಹೊರಟು ತೀವ್ರ ಮುಖಭಂಗ ಅನುಭವಿಸಿತು. ಅಲ್ಲಿನ ಬಿಕ್ಕಟ್ಟನ್ನು ಮುಂದಿಟ್ಟುಕೊಂಡು, ಕೇಂದ್ರ ಸರಕಾರ ಏಕಾಏಕಿ ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತವನ್ನು ಏರಿತು. ಆದರೆ ಇದಾದ ಜುಲೈ 13ರಂದು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ನಬಾಂ ತುಕಿ ಅವರು ಮತ್ತೆ ಮುಖ್ಯಮಂತ್ರಿಯಾಗಲು ಸುಪ್ರೀಂಕೋರ್ಟ್ ಅನುಮತಿ ನೀಡಿತು. ರಾಜ್ಯಪಾಲರ ನಿರ್ಧಾರ ಸಂವಿಧಾನದ ಉಲ್ಲಂಘನೆಯಾಗಿದೆ ಎನ್ನುವುದನ್ನು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತು. ಬಳಿಕ ತುಕಿ ಬದಲು ಪೆಮಾ ಖಂಡು ಮುಖ್ಯಮಂತ್ರಿಯಾದರು. ಆದರೆ ಅತಂತ್ರತೆ ಮಾತ್ರ ಮುಂದುವರಿಯಿತು. ರಾಜ್ಯದಲ್ಲಿ ಕಾಂಗ್ರೆಸ್ ತನ್ನದೇ ಶಾಸಕರ ಮೇಲೆ ಹಿಡಿತ ಕಳೆದುಕೊಂಡಿತು. ಪೆಮಾ ಖಂಡು ನೇತೃತ್ವದ 40ಕ್ಕೂ ಅಧಿಕ ಶಾಸಕರು ಕಾಂಗ್ರೆಸ್ ತ್ಯಜಿಸಿ ಪಿಪಿಎ ಪಕ್ಷವನ್ನು ಸೇರಿದರು. ಇಲ್ಲಿಗೇ ಇದು ಮುಗಿಯಲಿಲ್ಲ. ಮಾಜಿ ಮುಖ್ಯಮಂತ್ರಿ ಕಲಿಕೋ ಪೌಲ್ ನಿಗೂಢ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಡಿಸೆಂಬರ್ 30ರಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾಖಂಡು ಅವರನ್ನು ಅಶಿಸ್ತಿಗಾಗಿ ಅವರದೇ ಪಕ್ಷವು ಅಮಾನತುಗೊಳಿಸಿತು. ಇದೀಗ ಅರುಣಾಚಲಪ್ರದೇಶ ಒಂದೇ ವರ್ಷದಲ್ಲಿ ನಾಲ್ಕನೇ ಮುಖ್ಯಮಂತ್ರಿಯ ನಿರೀಕ್ಷೆಯಲ್ಲಿದೆ.

ಉಪವಾಸ ತೊರೆದ ಇರೋಮ್

ಮಣಿಪುರದಲ್ಲಿ ಜಾರಿಯಲ್ಲಿರುವ ಸೇನಾಪಡೆಗಳ ವಿಶೇಷ ಅಧಿಕಾರವನ್ನು ರದ್ದು ಮಾಡಬೇಕೆಂದು ಕಳೆದ 16 ವರ್ಷಗಳಿಂದ ತಾನು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹಕ್ಕೆ ಇರೋಮ್ ಶರ್ಮಿಳಾ ಈ ವರ್ಷ ಅಂತ್ಯ ಹಾಡಿದರು. ಕಣ್ಣಲ್ಲಿ ಎರಡು ಹನಿ. ಬಾಯಿಗೆ ಎರಡು ಹನಿ ಜೇನು. ಇದರ ಜೊತೆಗೆ ಹೊಸ ಪಕ್ಷವನ್ನು ಕಟ್ಟಿ, ತನ್ನ ಹೋರಾಟವನ್ನು ಮುಂದುವರಿಸುತ್ತೇನೆ ಎಂದೂ ಅವರು ಘೋಷಿಸಿದರು.

ಶರ್ಮಿಳಾ ಅವರು ಉಪವಾಸ ತೊರೆಯುವ ಕುರಿತಂತೆ ಹಲವರಿಗೆ ಅಸಮಾಧಾನವಿತ್ತು. ಉಪವಾಸ ತೊರೆದ ಬಳಿಕ ಶರ್ಮಿಳಾ ಅವರು ತಮ್ಮ ಹೋರಾಟಗಾರರಿಂದ ಬೇರ್ಪಟ್ಟರು ಎನ್ನುವ ಮಾತೂ ಕೇಳಿ ಬಂತು. ತನ್ನ ಪ್ರಿಯಕರನ ಕರೆಗೆ ಓಗೊಟ್ಟು ಉಪವಾಸ ತೊರೆದರು ಎಂಬ ಆರೋಪವೂ ಅವರ ಮೇಲಿದೆ.

ಸರ್ಜಿಕಲ್ ಸ್ಟ್ರೈಕ್

ಭಾರತ-ಪಾಕಿಸ್ತಾನದ ಸಂಬಂಧ 2016ರಲ್ಲಿ ತೀರಾ ಹಳಸಿ ಹೋಯಿತು. ಪಠಾಣ್‌ಕೋರ್ಟ್ ವಾಯುನೆಲೆಯ ಮೇಲೆ ಉಗ್ರರ ದಾಳಿ ಉಭಯ ದೇಶಗಳ ನಡುವಿನ ಸಂಬಂಧವನ್ನು ತೀರಾ ಹದಗೆಡಿಸಿತು. ಇದೇ ಸಂದರ್ಭದಲ್ಲಿ ಈ ದಾಳಿ ಮತ್ತು ಅದರ ವಿರುದ್ಧದ ಕಾರ್ಯಾಚರಣೆ ಹಲವು ವಿವಾದಗಳನ್ನೂ ಹುಟ್ಟಿಸಿ ಹಾಕಿತು. ಭಾರತದ ಕಾರ್ಯಾಚರಣೆಯ ಬಗ್ಗೆಯೂ ಅನುಮಾನಗಳು ಹೆಡೆಯೆತ್ತಿದವು. ಹಾಗೆಯೇ ಪಠಾಣ್‌ಕೋಟ್ ಕಾರ್ಯಾಚರಣೆಯ ಕುರಿತಂತೆ ಎನ್‌ಡಿ ಟಿವಿ ಮಾಡಿದ ವರದಿ ಕೇಂದ್ರ ಸರಕಾರವನ್ನು ಕೆರಳಿಸಿತು. ಟಿವಿ ವಾಹಿನಿಯ ಮೇಲೆ ಒಂದು ದಿನದ ನಿಷೇಧ ಹೇರುವಂತಹ ತೀರ್ಮಾನಕ್ಕೂ ಮುಂದಾಯಿತು. ಆದರೆ ಕೊನೆಯ ಗಳಿಗೆಯಲ್ಲಿ ಅದರಿಂದ ಹಿಂದೆ ಸರಿಯಬೇಕಾಯಿತು. ಇದಾದ ಬಳಿಕ ಸೆಪ್ಟಂಬರ್‌ನಲ್ಲಿ ನಡೆದ ಉರಿ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿ ಭಾರತದ ಉರಿಗೆ ಉಪ್ಪು ಸುರಿದಂತಾಯಿತು. ಈ ದಾಳಿ ಭಾರತಕ್ಕೆ ಭಾರೀ ಮುಖಭಂಗವನ್ನು ಉಂಟು ಮಾಡಿತು. ಇವೆಲ್ಲದರ ಪರಿಣಾಮವಾಗಿ ಅಂತಿಮವಾಗಿ ಸೆಪ್ಟಂಬರ್ ಮಾಸಾಂತ್ಯದಲ್ಲಿ ಸೇನೆ ಪಾಕಿಸ್ತಾನದ ಗಡಿ ನಿಯಂತ್ರಣವನ್ನು ದಾಟಿ, ಉಗ್ರರ ಹಲವು ಶಿಬಿರಗಳನ್ನು ಧ್ವಂಸ ಮಾಡಿದೆ ಎಂದು ಹೇಳಿಕೆ ನೀಡಿತು. ಈ ಸರ್ಜಿಕಲ್ ಸ್ಟ್ರೈಕ್ ಸಾಕಷ್ಟು ವಿವಾದಗಳಿಗೂ ಕಾರಣವಾಯಿತು. ಭಾರತ ತಾನು ದಾಳಿ ಮಾಡಿದ್ದೇನೆ ಎಂದು ಹೇಳಿದರೆ, ಪಾಕಿಸ್ತಾನ ಅಂತಹ ದಾಳಿಯೇ ನಡೆದಿಲ್ಲ. ಗಡಿ ಉಲ್ಲಂಘಿಸಿದ ಭಾರತೀಯ ಯೋಧನೊಬ್ಬನನ್ನು ತಾನು ಬಂಧಿಸಿದ್ದೇನೆ ಎಂದು ಹೇಳಿಕೊಂಡಿತು. ಮೋದಿ ಸರಕಾರ ತನ್ನ ರಾಜಕೀಯಕ್ಕಾಗಿ ಸೇನೆಯ ಗೌಪ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪವೂ ಕೇಳಿ ಬಂತು. ಒಟ್ಟಿನಲ್ಲಿ ಸರ್ಜಿಕಲ್ ಸ್ಟ್ರೈಕ್ ಎನ್ನುವುದು ಕೊನೆಗೂ ಬಿಡಿಸಲಾಗದ ಒಗಟಾಗಿಯೇ ಉಳಿದಿದೆ. ಈ ಸ್ಟ್ರೈಕ್‌ನ ಬಳಿಕವೂ ಉಗ್ರರು ಹಲವು ಬಾರಿ ದಾಳಿ ನಡೆಸಿದ್ದು, ಮೋದಿಯ ಹೇಳಿಕೆಗಳ ವಿರೋಧಾಭಾಸಗಳಿಗೆ ಸಾಕ್ಷಿಯಾಗಿದೆ.

ಅಗಲಿದ ಪ್ರಮುಖರು

ಕರ್ನಾಟಕ ಸಂಗೀತದ ದಿಗ್ಗಜ ಬಾಲಮುರಳೀಕೃಷ್ಣ, ಲೋಕಸಭೆಯ ಮಾಜಿ ಸ್ಪೀಕರ್‌ಗಳಾದ ಬಲರಾಂ ಜಾಖಡ್, ಪಿ.ಎ.ಸಂಗ್ಮಾ, ಉರ್ದು ಕವಿ ನಿದಾ ಫಜ್ಲಿ, ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಮುಫ್ತಿ ಮುಹಮ್ಮದ್ ಸಯೀದ್, ಪತ್ರಕರ್ತ ಚೋ ರಾಮಸ್ವಾಮಿ, ನೃತ್ಯಗಾತಿ ಮೃಣಾಲಿನಿ ಸಾರಾಭಾಯಿ, ವ್ಯಂಗ್ಯಚಿತ್ರಕಾರ ಸುಧೀರ್ ತೈಲಾಂಗ್, ಕಲಾವಿದರಾದ ಪ್ರತ್ಯೂಷ್ ಬ್ಯಾನರ್ಜಿ, ಸುಲಭ ದೇಶಪಾಂಡೆ, ರಾಜತಾಂತ್ರಿಕರಾದ ಅರುಂಧತಿ ಘೋಷ್, ಸಿಪಿಐ ನಾಯಕ ಎ.ಬಿ.ಬರ್ಧನ್, ಚಿತ್ರಕಲಾವಿದ ಎಸ್.ಎಚ್.ರಾಜಾ, ಯೂಸುಫ್ ಅರಕ್ಕಲ್, ಬರಹಗಾರ್ತಿ ಮಹಾಶ್ವೇತಾ ದೇವಿ, ಮಹಿಳಾ ಉದ್ಯಮಿ ಪರಮೇಶ್ವರಿ ಗೋದ್ರೆಜ್, ಖ್ಯಾತ ಗೀತರಚನೆಕಾರ ಗೀತಪ್ರಿಯ, ಹಾಸ್ಯನಟ ಕಾಶಿ, ಪತ್ರಕರ್ತ ಇಂದರ್ ಮಲ್ಹೋತ್ರಾ.

ದೇಶದಲ್ಲಿ ಸಂಭವಿಸಿದ ಪ್ರಮುಖ ದುರಂತಗಳು

ಹಿಮಪಾತ- 10 ಸೈನಿಕರು ಸಮಾಧಿ:  ಜಗತ್ತಿನ ಅತೀ ಎತ್ತರದ ಸಮರಭೂಮಿ ಸಿಯಾಚಿನ್ ಗ್ಲೇಸಿಯರ್‌ನಲ್ಲಿ 2016ರ ಫೆ.3ರಂದು ನಡೆದ ಹಿಮಪಾತದಲ್ಲಿ 10 ಸೈನಿಕರು ಹಿಮದಡಿ ಸಿಲುಕಿ ನಾಪತ್ತೆಯಾದರು. ಆರು ದಿನದ ಬಳಿಕ ಕರ್ನಾಟಕ ಮೂಲದ ಯೋಧ ಹನುಮಂತಪ್ಪ ಕೊಪ್ಪದ ಅವರು 35 ಅಡಿ ಆಳದಲ್ಲಿ ಹಿಮದೊಳಗೆ ಸಿಕ್ಕಿಬಿದ್ದಿರುವುದು ಪತ್ತೆಯಾಯಿತು. ಅವರನ್ನು ರಕ್ಷಿಸಲಾಯಿತು. ಆದರೆ ಬಹುಅಂಗಗಳ ವೈಫಲ್ಯದಿಂದ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಸಿಯಾಚಿನ್‌ನಲ್ಲಿ ಚಳಿಗಾಲದಲ್ಲಿ ಕನಿಷ್ಠ ಉಷ್ಣಾಂಶ ಮೈನಸ್ 50ರಿಂದ ಮೈನಸ್ 140 ಡಿಗ್ರಿ ಸೆಲ್ಶಿಯಸ್‌ಗೆ ಕುಸಿಯುತ್ತದೆ. ಇದುವರೆಗೆ ಸಿಯಾಚಿನ್ ಪ್ರಾಂತ್ಯದಲ್ಲಿ ಹಿಮಾಘಾತದಿಂದ 8 ಸಾವಿರಕ್ಕೂ ಹೆಚ್ಚು ಸೈನಿಕರು ಬಲಿಯಾಗಿದ್ದಾರೆ ಎಂದು ಸೇನಾಪಡೆಯ ಅಂಕಿಅಂಶ ತಿಳಿಸಿದೆ.
 
ಕೋಲ್ಕತಾದಲ್ಲಿ ಫ್ಲೈಓವರ್ ಕುಸಿದು 27 ಬಲಿ: ಮಾ.31ರ ಅಪರಾಹ್ನ ಉತ್ತರ ಕೋಲ್ಕತಾದ ಬುರ್ರಾ ಬಝಾರ್ ಮಾರುಕಟ್ಟೆ ಬಳಿಯ ಸದಾ ಜನಸಂಚಾರವಿರುವ ಪ್ರದೇಶದಲ್ಲಿ 2.2 ಕಿ.ಮೀ. ಉದ್ದದ ನಿರ್ಮಾಣ ಹಂತದ ವಿವೇಕಾನಂದ ಫ್ರೈಓವರ್ ಕಳಪೆ ಕಾಮಗಾರಿಯಿಂದ ಕುಸಿದು 27 ಜನ ಪ್ರಾಣ ಕಳೆದುಕೊಂಡರು. 60 ಮಂದಿ ಗಾಯಗೊಂಡರು. ಭಾರೀ ಗಾತ್ರದ ಕಾಂಕ್ರಿಟ್ ಸ್ಲಾಬ್‌ಗಳು ಮತ್ತು ಲೋಹದ ತುಂಡುಗಳು ಫ್ಲೈ ಓವರ್ ಮೇಲಿಂದ ರಸ್ತೆಗೆ ಕುಸಿದುಬಿದ್ದ ಸಂದರ್ಭ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳು ಮತ್ತು ಜನರು ಅದರಡಿ ಸಿಲುಕಿ ಅಪ್ಪಚ್ಚಿಯಾದರು. ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ಸೇನೆಯ ನೆರವು ಪಡೆಯಲಾಯಿತು.

ಗುಜರಾತ್‌ನಲ್ಲಿ ಬಸ್ಸು ದುರಂತ:  ಫೆ.5ರಂದು ದಕ್ಷಿಣ ಗುಜರಾತ್‌ನ ನವ್‌ಸರಿ ಜಿಲ್ಲೆಯಲ್ಲಿ ನಡೆದ ಅಪಘಾತದಲ್ಲಿ ಬಸ್ಸೊಂದು ಸೇತುವೆಯಿಂದ ಕೆಳಜಾರಿ ಪೂರ್ಣಾ ನದಿಗೆ ಬಿದ್ದು 41 ಪ್ರಯಾಣಿಕರು ಮೃತಪಟ್ಟು 24 ಮಂದಿ ಗಾಯಗೊಂಡರು. ಆಗಸ್ಟ್ 3ರಂದು ಗೋವಾ-ಮುಂಬೈ ಹೆದ್ದಾರಿಯ ಸಾವಿತ್ರಿ ನದಿ ಮೇಲಿನ ಸೇತುವೆ ಮುರಿದು ಎರಡು ಸರಕಾರಿ ಬಸ್ಸುಗಳು ಕೊಚ್ಚಿಹೋಗಿ 22 ಮಂದಿ ಸಾವನ್ನಪ್ಪಿದರು.

ಉತ್ತರ ಭಾರತದಲ್ಲಿ ಉಷ್ಣಹವೆ: ಉತ್ತರ ಭಾರತದಲ್ಲಿ ಎಪ್ರಿಲ್- ಮೇ ತಿಂಗಳಲ್ಲಿ ತೀವ್ರಗೊಂಡ ಉಷ್ಣಹವೆ. ರಾಜಸ್ಥಾನದ ಫಲೋಡಿಯಲ್ಲಿ 55 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಯಿತು. ರಾಜಧಾನಿ ದಿಲ್ಲಿಯಲ್ಲೂ ಉಷ್ಣಾಂಶ ಗರಿಷ್ಠ ಮಟ್ಟ ತಲುಪಿದೆ. ಪೂರ್ವಾಹ್ನ 11ರಿಂದ ಅಪರಾಹ್ನ 4ರವರೆಗೆ ಮನೆಯೊಳಗೇ ಇರುವಂತೆ ಸೂಚಿಸಲಾಯಿತು. ತೀವ್ರ ಬಿಸಿಲಿನ ಝಳಕ್ಕೆ ಉತ್ತರ ಭಾರತದಲ್ಲಿ ಸುಮಾರು 160 ಮಂದಿ ಬಲಿಯಾದರೆ, 33 ಕೋಟಿಗೂ ಹೆಚ್ಚಿನ ಮಂದಿ ಸಂಕಷ್ಟಕ್ಕೆ ಗುರಿಯಾದರು.

ವಾಯುಪಡೆ ವಿಮಾನ ಕಣ್ಮರೆ: ಜುಲೈ 22ರಂದು ಚೆನ್ನೈಯ ತಾಂಬರಂ ವಾಯುನೆಲೆಯಿಂದ ಪೋರ್ಟ್‌ಬ್ಲೇರ್‌ಗೆ ಹೊರಟಿದ್ದ ವಾಯುಪಡೆಯ ವಿಮಾನವೊಂದು ಬಂಗಾಲ ಕೊಲ್ಲಿಯ ಮೇಲಿಂದ ಹಾರುತ್ತಿದ್ದಾಗ ನಿಗೂಢ ರೀತಿಯಲ್ಲಿ ಕಣ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News