×
Ad

ಆಲಿಯಾ ಭಟ್ ಎಂದರೆ ಜೈಲಿಗೆ, ಪ್ರಿಯಾಂಕಾ ಛೋಪ್ರಾ ಪೊಲೀಸ್ ವಶದಲ್ಲಿ !

Update: 2017-01-03 12:08 IST

ಮುಂಬೈ, ಜ.3: ಪ್ರಿಯಾಂಕ ಛೋಪ್ರ ಅವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ! ತಪ್ಪುತಿಳಿಯಬೇಡಿ, ಇದು ನಟಿಯಲ್ಲ, ನಾವು ಮಾತನಾಡುತ್ತಿರುವುದ ಡ್ರಗ್ ಎಲ್ ಎಸ್ ಡಿ ಬಗ್ಗೆ. ಡ್ರಗ್ಸ್ ಜಾಲದ ಮಂದಿ ಉಪಯೋಗಿಸುತ್ತಿರುವ ಹಲವು ಕೋಡ್ ವರ್ಡ್ ಗಳನ್ನು ಬೇಧಿಸಲು ಮುಂಬೈ ಕ್ರೈಂ ಬ್ರಾಂಚಿನ ಸತತ ಶ್ರಮ ಫಲ ನೀಡಿದೆಯೆಂದೇ ಹೇಳಬಹುದು. ಆಶ್ಚರ್ಯವೆಂಬಂತೆ ಡ್ರಗ್ಸ್ ಜಾಲದ ಮಂದಿ ಉಪಯೋಗಿಸುತ್ತಿದ್ದ ಹೆಚ್ಚಿನ ಕೋಡ್ ವರ್ಡ್ ಗಳುಬಾಲಿವುಡ್ ಸೆಲೆಬ್ರಿಟಿಗಳ ಹೆಸರಾಗಿದ್ದವು ಎಂದು ಬಾಲಿವುಡ್ ಹಂಗಾಮ ವರದಿಯೊಂದು ತಿಳಿಸಿದೆ. ಮುಂದಿನ ದಿನಗಳಲ್ಲಿ ನಿಮಗೆ ಆಲಿಯಾ ಭಟ್ಟ್ ಇಲ್ಲದೆ ಇರಲು ಸಾಧ್ಯವಿಲ್ಲವೆಂದು ನೀವು ಹೇಳಿದಿರಾದರೆ ಅದು ನಿಮ್ಮನ್ನು ಜೈಲುಗಂಬಿ ತಳ್ಳುವಂತೆ ಮಾಡಬಹುದು.

ಮುಂಬೈ ಪೊಲೀಸರು ಕಂಡುಕೊಂಡ ಡ್ರಗ್ಸ್ ಜಾಲದ ಕೋಡ್ ವರ್ಡ್ ಗಳು ಹೀಗಿವೆ.
ರಣಬೀರ್ ಕಪೂರ್ : ಹೋಸ್ಟ್
ಕಂಗನಾ ರಾನೌತ್ : ಅಫೀಮು
ಕತ್ರೀನಾ ಕೈಫ್ : ಹೆರಾಯಿನ್ ಅಥವಾ ಸ್ಮ್ಯಾಕ್
ಪ್ರಿಯಾಂಕ ಛೋಪ್ರ : ಎಲ್ ಎಸ್ ಡಿ
ಅನುಷ್ಕಾ ಶರ್ಮ: ಹಶೀಶ್
ರಣವೀರ್ ಸಿಂಗ್ : ಡ್ರಗ್ಸ್ ಮಾರಾಟಗಾರ
ನರ್ಗಿಸ್ ಫಕ್ರಿ : ಎಕ್ಸ್ ಟೆಸಿ
ಆಲಿಯಾ ಭಟ್: ಕೊಕೇನ್

ಡ್ರಗ್ಸ್ ವವಹಾರಗಳನ್ನು ‘‘ಸುಲ್ತಾನ್ ಯಾವತ್ತೂ ತಡ’’ ಹಾಗೂ ‘‘ಕೊನೆಯ ಬಾರಿ ಸುಲ್ತಾನ್ ಗೆ ದೊರಕಿದ ಬಾಕ್ಸಾಫೀಸ್ ಹಿಟ್’’ ಮುಂತಾದ ಪದಗಳನ್ನು ಉಪಯೋಗಿಸಿ ವಿವರಿಸಲಾಗುತ್ತಿತ್ತು. ಹೊಸ ವರ್ಷಾಚರಣೆಯಲ್ಲಿ ಬಾಲಿವುಡ್ ಜನರ ಬಾಳಿನಲ್ಲಿ ಹಲವು ವಿಧದಲ್ಲಿ ಕಾಣಿಸಿಕೊಂಡವು. ಇತ್ತೀಚಿಗಿನ ಹಿಟ್ ಚಿತ್ರಗಳಾದ ಬಾಜಿರಾವ್ ಮಸ್ತಾನಿ, ಪಿಂಕ್ ಹಾಗೂ ಮರಾಠಿ ಚಿತ್ರ ಸೈರಾಟ್ ಹೆಸರುಗಳು ಡಿಸೈನರ್ ಡ್ರಗ್ಸ್ ಗಳಿಗೆ ಕೋಡ್ ವರ್ಡ್‌ಗಳಾಗಿದ್ದವು.

ಪೊಲೀಸರು ಈ ಕೋಡ್ ವರ್ಡ್ ಗಳನ್ನು ಸಮರ್ಥವಾಗಿ ಎದುರಿಸಲು ಸಹಾಯವಾಣಿಯೊಂದನ್ನು ಸ್ಥಾಪಿಸಿದ್ದಾರಲ್ಲದೆ ಡ್ರಗ್ಸ್ ಬಗ್ಗೆ ಯಾವುದೇ ಮಾಹಿತಿ ದೊರಕಿದರೂ ಈ ಸಹಾಯವಾಣಿಗೆ ಕರೆ ಮಾಡಿ ತಿಳಿಸಬೇಕೆಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News