×
Ad

ಮೋದಿ ಗಾಳಿ ಹೋದ ಬಲೂನ್: ಲೀಗ್ ರಾಷ್ಟ್ರೀಯ ಖಜಾಂಚಿ ಪಿ.ಕೆ. ಕುಂಞಾಲಿಕುಟ್ಟಿ

Update: 2017-01-03 12:53 IST

ಮಲಪ್ಪುರಂ,ಜ.3: ನೋಟು ಅಮಾನ್ಯದಿಂದ ಸೃಷ್ಟಿಯಾದ ಸಮಸ್ಯೆಯನ್ನು 50 ದಿವಸಗಳಲ್ಲಿ ಬಗೆಹರಿಸುತ್ತೆನೆಂದ ಪ್ರಧಾನಿ ನರೇಂದ್ರಮೋದಿ ಈಗ ಗಾಳಿ ಹೋದ ಬಲೂನ್‌ನ ಅವಸ್ಥೆಯಲ್ಲಿದ್ದಾರೆಂದು ಕೇರಳ ಮುಸ್ಲಿಂ ಲೀಗ್ ರಾಷ್ಟ್ರೀಯ ಖಜಾಂಚಿ ಪಿ.ಕೆ. ಕುಂಞಾಲಿಕುಟ್ಟಿ ಹೇಳಿದ್ದಾರೆ.

ಐವತ್ತುದಿವಸಗಳಲ್ಲಿ ಎಲ್ಲವೂ ಸರಿಯಾಗುತ್ತದೆ. ಆಗದಿದ್ದರೆ ತನ್ನನ್ನು ಗುಂಡಿಟ್ಟುಸಾಯಿಸಿ ಎಂದು ಪ್ರಧಾನಿಹೇಳಿದ್ದರು. ಆದರೆ ಅವರ ಇಂತಹ ಆಟಗಳ ವಿರುದ್ಧ ಬಲವಾಗಿ ಪ್ರತಿಕ್ರಿಯಿಸುವ ಶಕ್ತಿಯಿರುವ ಪ್ರತಿಪಕ್ಷ ಇಲ್ಲದಿರುವುದು ದುರಂತ ಎಂದು ಲೀಗ್ ರಾಷ್ಟ್ರೀಯ ಖಜಾಂಚಿ ಪಿ.ಕೆ, ಕುಂಞಾಲಿಕುಟ್ಟಿ ಮಲಪ್ಪುರಂ ಜಿಲ್ಲಾ ಮುಸ್ಲಿಂ ಯೂತ್ ಲೀಗ್ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News