×
Ad

ಅತ್ಯಾಚಾರಕ್ಕೆ ಯತ್ನಿಸಿ ಪುತ್ರಿಯಿಂದಲೇ ಹತನಾದ ಅಪ್ಪ

Update: 2017-01-03 16:11 IST

ಬರೇಲಿ(ಉ.ಪ್ರ),ಜ.3: ತನ್ನ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ್ದ ತಂದೆಯನ್ನು ಮಗಳೇ ದೊಣ್ಣೆಯಿಂದ ಬಡಿದು ಆತನ ಕಥೆಯನ್ನು ಮುಗಿಸಿದ ಘಟನೆ ನಗರದಲ್ಲಿ ನಡೆದಿದೆ. 14ರ ಹರೆಯದ ಬಾಲಕಿಯ ತಾಯಿ ಊರಿಗೆ ತೆರಳಿದ್ದು, ನಿನ್ನೆ ಸಂಜೆ ಆಕೆ ತನ್ನ ಶಿಕ್ಷಕ ತಂದೆ ಸೋಮಪಾಲ್(45) ಜೊತೆ ಮನೆಯಲ್ಲಿದ್ದಳು. ಈ ಸಂದರ್ಭ ಸೋಮಪಾಲ ಮಗಳ ಮೇಲೆಯೇ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದ. ಮೊದಲು ಗಾಬರಿಗೊಂಡ ಬಾಲಕಿ ಬಳಿಕ ತಂದೆಯ ಹೀನ ಮನಃಸ್ಥಿತಿಯ ಬಗ್ಗೆ ಆಕ್ರೋಶಗೊಂಡು ಕೈಗೆ ಸಿಕ್ಕಿದ ದೊಣ್ಣೆಯಿಂದ ಆತನಿಗೆ ಸರಿಯಾಗಿಯೇ ಬಾರಿಸಿದ್ದಾಳೆ. ತಲೆಗೆ ಬಲವಾದ ಏಟು ಬಿದ್ದ ಪರಿಣಾಮ ಸೋಮನಾಥ ಸ್ಥಳದಲ್ಲಿಯೇ ಗೊಟಕ್ಕೆಂದಿದ್ದಾನೆ.

ಇಷ್ಟಾದ ಬಳಿಕ ಬಾಲಕಿ ತಾಯಿಯ ಮೊಬೈಲ್‌ಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಳು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News