×
Ad

ಸಿಯಾಲ್ಡಾ-ಅಜ್ಮೇರ್ ರೈಲು ಅವಘಡ: ನಾಲ್ವರು ರೈಲ್ವೆ ಅಧಿಕಾರಿಗಳ ಅಮಾನತು

Update: 2017-01-03 18:15 IST

ಹೊಸದಿಲ್ಲಿ,ಜ.3: ಡಿ.28ರಂದು ಸಿಯಾಲ್ಡಾ-ಅಜ್ಮೇರ್ ಎಕ್ಸಪ್ರೆಸ್ ರೈಲು ಹಳಿ ತಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಚ್ಯುತಿಯ ಆರೋಪದಲ್ಲಿ ನಾಲ್ವರು ಅಧಿಕಾರಿಗಳನ್ನು ರೈಲ್ವೆ ಇಲಾಖೆಯು ಇಂದು ಸೇವೆಯಿಂದ ಅಮಾನತುಗೊಳಿಸಿದೆ.

ತನ್ಮಧ್ಯೆ ಅಪಘಾತದ ಕುರಿತು ರೈಲ್ವೆ ಸುರಕ್ಷತಾ ಆಯುಕ್ತ(ಉತ್ತರ ವಲಯ) ಶೈಲೇಶ ಕುಮಾರ್ ಪಾಠಕ್ ಅವರು ಪ್ರತ್ಯೇಕ ತನಿಖೆಯನ್ನು ನಡೆಸುತ್ತಿದ್ದು, ಈ ತಿಂಗಳೊಳಗೆ ತನ್ನ ವರದಿಯನ್ನು ರೈಲ್ವೆ ಸಚಿವಾಲಯಕ್ಕೆ ಸಲ್ಲಿಸುವ ನಿರೀಕ್ಷೆಯಿದೆ.

ಕಾನ್ಪುರ್ ಗ್ರಾಮೀಣ ಜಿಲ್ಲೆಯಲ್ಲಿ ರುರಾ ರೈಲ್ವೆ ನಿಲ್ದಾಣದ ಬಳಿ ಸಿಯಾಲ್ಡಾ-ಅಜ್ಮೇರ್ ಎಕ್ಸಪ್ರೆಸ್‌ನ 15 ಬೋಗಿಗಳು ಹಳಿ ತಪ್ಪಿದ ಪರಿಣಾಮ ಕನಿಷ್ಠ 62 ಪ್ರಯಾಣಿಕರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News