ಕೊಲ್ಕತ್ತಾ ಬಿಜೆಪಿ ಕಚೇರಿಗೆ ದಾಳಿ, ಕಲ್ಲೆಸೆತ: ವೀಡಿಯೊ ನೋಡಿ
Update: 2017-01-04 14:25 IST
ಕೊಲ್ಕತ್ತಾ, ಜ.4: ರೋಸ್‌ವ್ಯಾಲಿ ಚಿಟ್ ಫಂಡ್ ಹಗರಣದಲ್ಲಿ ತೃಣಮೂಲ ಸಂಸದ ಸುದೀಪ್ ಬಂದೋಪಾಧ್ಯಾಯ ಬಂಧನವನ್ನು ಪ್ರತಿಭಟಿಸಿ ಯುವ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಕೊಲ್ಕತ್ತಾ ಬಿಜೆಪಿ ಕಚೇರಿಗೆ ದಾಳಿ ಮಾಡಿದ್ದಾರೆ.
ಘಟನೆಯ ನಂತರ ಕಚೇರಿಯ ಹೊರಗೆ ಸಿಆರ್‌ಪಿಎಫ್‌ನ್ನು ನಿಯೋಜಿಸಲಾಗಿದೆ.ತೃಣಮೂಲ ಕಾರ್ಯಕರ್ತರ ಕಲ್ಲೆಸೆತದಿಂದ 15 ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ ಹೇಳಿದ್ದಾರೆ. ಆದರೆ, ಬಿಜೆಪಿ ರಾಜಕೀಯ ದ್ವೇಷ ಸಾಧಿಸುತ್ತಿದೆ ಎಂದು ತೃಣಮೂಲ ಕಾರ್ಯಕರ್ತರು ಆರೋಪಿಸಿದ್ದಾರೆಂದು ವರದಿ ತಿಳಿಸಿದೆ.
#WATCH TMC workers protest outside BJP's Kolkata office after TMC MP Sudip Bandyopadhyay's arrest pic.twitter.com/WttBqJxz0H
— ANI (@ANI_news) January 3, 2017