ಮೇಲ್ಮನವಿ ಇತ್ಯರ್ಥದ ತನಕ ಕಾವೇರಿ ನೀರು ಹರಿಸಿ
Update: 2017-01-04 14:51 IST
ಹೊಸದಿಲ್ಲಿ, ಜ.4: ಕಾವೇರಿ ನದಿ ನೀರು ಹಂಚಿಕೆಯ ಸಂಬಂಧ ಮೇಲ್ಮನವಿ ಇತ್ಯರ್ಥವಾಗುವ ತನಕ ತಮಿಳುನಾಡಿಗೆ ಪ್ರತಿದಿನ 2,000 ಕ್ಯೂಸೆಕ್ ನೀರನ್ನು ಹರಿಸಬೇಕು ಎಂದು ಸುಪ್ರೀಂಕೋಟ್ ಬುಧವಾರ ಸೂಚನೆ ನೀಡಿದೆ.
ಮೇಲ್ಮನವಿ ವಿಚಾರಣೆಯ ತನಕ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಬೇಕು ಎಂದು ನ್ಯಾ.ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಆದೇಶಿಸಿದೆ.
ಕಾವೇರಿ ವಿವಾದಕ್ಕೆ ಸಂಬಂಧಿಸಿದ ಮೇಲ್ಮನವಿ ವಿಚಾರಣೆ ಫೆ.7 ರಿಂದ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ.