ಬಾಲಿವುಡ್ ನ ಚಾಕೊಲೇಟ್ ಹೀರೋಗಳ ನಡುವೆ ವಿಶ್ವದ ಗಮನ ಸೆಳೆದ ಅದ್ಭುತ ನಟ

Update: 2017-01-06 09:28 GMT

ಮುಂಬೈ,ಜ.6 : ಮುಖದಲ್ಲಿ ಒಂದೊಮ್ಮೆ ಉಂಟಾದ ಸಿಡುಬು ರೋಗದ ಕಲೆಗಳು. ಆ ವ್ಯಕ್ತಿಯನ್ನೊಮ್ಮೆ ನೋಡಿದರೆ ಬಾಲಿವುಡ್ ನ ಚಾಕೊಲೇಟ್ ಹೀರೋಗಳ ನಡುವೆ ಅವರು ಎಲ್ಲಿ ಸಲ್ಲಬಹುದೆಂಬ ಯೋಚನೆ ವರ್ಷಗಳ ಹಿಂದೆ ಹಲವರಿಗೆ ಬಂದಿರದೇ ಇರದು.ಆದರೆ  ಆ ಚಾಕೊಲೇಟ್ ಹೀರೋಗಳ ನಡುವೆಯೂ ತನ್ನ ಅದ್ಭುತ ಪ್ರತಿಭೆಯಿಂದ ಗಮನ ಸೆಳೆದ ನಟನೆಂದರೆ ಅವರೇ ಓಂ ಪುರಿ. 1950ರ ಅಕ್ಟೋಬರ್ 18ರಂದು ಜನಿಸಿದ ಓಂಪುರಿ ಮೊದಲ ಬಾರಿಗೆ ಬೆಳ್ಳಿ ಪರದೆಯ ಮೇಲೆ ಜಬ್ಬಾರ್ ಪಟೇಲ್ ಅವರ ನಿರ್ದೇಶನದ ಮರಾಠಿ ಚಿತ್ರ ಘಸೀರಾಂ ಕೋತ್ವಾಲ್ ನಲ್ಲಿಕಾಣಿಸಿಕೊಂಡಿದ್ದರು. ನಂತರ ಅವರು ಹಲವಾರು ಹಿಂದಿ ಚಿತ್ರಗಳಲ್ಲಿ ತಮ್ಮ ಅಭಿನಯದಿಂದಲೇ ಜನಾನುರಾಗಿಯಾದರು.

ಅವರ ಹತ್ತು ಮರೆಯಲಾರದ ಚಿತ್ರಗಳ ಬಗ್ಗೆ ಇಲ್ಲಿ ಓದಿ.

ಆಕ್ರೋಶ್ (1980) :

Full View

ಗೋವಿಂದ್ ನಿಹಲಾನಿ ನಿರ್ದೇಶನದ ಪ್ರಥಮ ಚಿತ್ರವು ಓಂ ಪುರಿಯವರಿಗೆ ಹಿಂದಿ ಚಿತ್ರರಂಗದಲ್ಲಿ ಒಂದು ವಿಶಿಷ್ಟ ಗುರುತು ನೀಡಿತು. ವಿಜಯ್ ತೆಂಡುಲ್ಕರ್ ಅವರ ನಾಟಕದ ಕಥೆಯಾಧರಿತ ಈ ಚಿತ್ರದಲ್ಲಿ ಓಂ ಪುರಿ ಜತೆ ನಾಸಿರುದ್ಧೀನ್ ಶಾ ಹಾಗೂ ಅಮರೀಶ್ ಪುರಿ ಮುಖ್ಯ ಭೂಮಿಕೆಯಲ್ಲಿದ್ದರು. ಚಿತ್ರದಲ್ಲಿ ಓಂ ಪುರಿ ಲಹನ್ಯ ಭೀಖು ಪಾತ್ರಧಾರಿಯಾಗಿದ್ದರು.

ಅರ್ಧ ಸತ್ಯ್ (1983) :

Full View

ಇದು ಕೂಡ ಗೋವಿಂದ್ ನಿಹಲಾನಿ ಚಿತ್ರವಾಗಿದ್ದುಇದರಲ್ಲಿ ಸಬ್ ಇನಸ್ಪೆಕ್ಟರ್ ಅನಂತ್ ವೆಲನ್ಕರ್ ಆಗಿ ಅಭಿನಯಿಸಿದ್ದ ಓಂ ಪುರಿಗೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ದೊರಕಿತ್ತು.

ಜಾನೆ ಭಿ ದೋ ಯಾರೋ (1983) :

Full View

ಕುಂದನ್ ಶಾ ನಿರ್ದೇಶನದಈ ಹಾಸ್ಯಭರಿತ ಚಿತ್ರವು ಭಾರತದ ರಾಜಕಾರಣ, ಭ್ರಷ್ಟಾಚಾರ, ಮಾಧ್ಯಮ ಮುಂತಾದ ಕ್ಷೇತ್ರಗಳ ಬಗ್ಗೆತನ್ನ ವ್ಯಂಗ್ಯಭರಿತ ಕಥಾ ಹಂದರದಿಂದ ಗಮನ ಸೆಳೆದಿತ್ತು.

ದ್ರೋಹ್ ಕಾಲ್ (1984) :

Full View

ಇದು ಕೂಡ ಗೋವಿಂದ್ ನಿಹಲಾನಿ ಚಿತ್ರವಾಗಿದ್ದು ಉಗ್ರವಾದದ ಕಥೆಯನ್ನು ಹೊಂದಿತ್ತಲ್ಲದೆ ಇದರಲ್ಲಿ ಓಂ ಪುರಿ ಡಿಸಿಪಿ ಅಭಯ್ ಸಿಂಹ್ ಪಾತ್ರಧಾರಿಯಾಗಿ ಅಭಿನಯಿಸಿದ್ದರು.

ಚಾಚಿ 420 ( 1997) :

Full View

ಕಮಲಹಾಸನ್ ಅವರ ಅಭಿನಯದ ಈ ಖ್ಯಾತ ಚಿತ್ರದಲ್ಲಿ ಓಂ ಪುರಿ ಮತ್ತೊಮ್ಮೆ ತಾವು ಹಾಸ್ಯ ಭರಿತ ಪಾತ್ರಗಳಿಗೂ ಸೈ ಎಂದು ಎನಿಸಿಕೊಂಡಿದ್ದಾರೆ.

ಆಸ್ಥಾ (1997) :

ಬಸು ಭಟ್ಟಾಚಾರ್ಯ ಅವರ ಈ ಚಿತ್ರ ವಿವಾಹೇತರ ಸಂಬಂಧದ ಕಥೆ ಹೊಂದಿರುವ ಬೋಲ್ಡ್ ಸಿನೆಮಾ ಎಂದು ಗುರುತಿಸಿಕೊಂಡಿತ್ತು. ಚಿತ್ರದಲ್ಲಿ ಓಂ ಪುರಿ, ರೇಖಾ ಮತ್ತು ನವೀನ್ ನಿಶ್ಚಲ್ ಅಭಿನಯಿಸಿದ್ದರು.ಚಿತ್ರದಲ್ಲಿ ಓಂ ಪುರಿ ರೇಖಾ ಪತಿಯಾಗಿ ಅಭಿನಯಿಸಿದ್ದರು.

ಈಸ್ಟ್ ಈಸ್ ಈಸ್ಟ್ (1999) :

Full View

ಡೆಮಿಯನ್ ಓಂಡೊನೆಂಟ್ ಅವರ ಚಿತ್ರದಲ್ಲಿ ಬ್ರಿಟನ್ನಿನಲ್ಲಿ ನೆಲೆಸಿರುವ ಪಾಕಿಸ್ತಾನಿ ನಾಗರಿಕನ ಪಾತ್ರ ನಿರ್ವಹಿಸಿದ್ದದರು.

ಹೇರಾ ಫೇರಿ (2000) :

Full View

ಪ್ರಿಯದರ್ಶನ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಓಂ ಪುರಿ ಮತ್ತೆ ಹಾಸ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ.

ಮಕ್ಬೂಲ್ (2003) :

Full View

ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಇರ್ಫಾನ್ ಖಾನ್ ಹಾಗೂ ಟಬು ಇದ್ದರೂ ಓಂ ಪುರಿ ಹಾಗೂ ನಾಸಿರುದ್ಧೀನ್ ಶಾ ಕೂಡ ತಮ್ಮ ಅಭಿನಯದಿಂದ ಗಮನ ಸೆಳೆದಿದ್ದಾರೆ.

ದಿ ಜಂಗಲ್ ಬುಕ್ (2016) :

Full View

ಭಾರತೀಯ ಟೆಲಿವಿಷನ್ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಧಾರಾವಾಹಿಗಳಲ್ಲೊಂದಾಗಿದ್ದ ಜಂಗಲ್ ಬುಕ್ ಇದರ ಅನಿಮೇಶನ್ ಚಿತ್ರದಲ್ಲಿ

ಓಂ ಪುರಿಯವರು ಮೋಗ್ಲಿಯ ಅತ್ಯಂತ ವಿಶ್ವಸನೀಯ ಸಹವರ್ತಿಗೆ ಕಂಠದಾನ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News