×
Ad

ಸಾಮೂಹಿಕ ಅತ್ಯಾಚಾರಯತ್ನ ವಿಫಲಗೊಳಿಸಿದ ಬಾಲಕಿಯ ಕಿವಿ ಕತ್ತರಿಸಿದ ದುಷ್ಕರ್ಮಿಗಳು

Update: 2017-01-06 17:44 IST

ಹೊಸದಿಲ್ಲಿ,ಜ.6: ಸಾಮೂಹಿಕ ಅತ್ಯಾಚಾರ ಯತ್ನವನ್ನು ವಿಫಲಗೊಳಿಸಿದ ಬಾಲಕಿಯ ಕಿವಿ ಕತ್ತರಿಸಿದ ಘಟನೆ ಹೊಸದಿಲ್ಲಿಗೆ 70 ಕಿ.ಮೀ. ದೂರದ ಉತ್ತರ ಪ್ರದೇಶದ ಬಾಗ್‌ಪತ್‌ನಿಂದ ವರದಿಯಾಗಿದೆ. ನಾಲ್ವರು ದುಷ್ಕರ್ಮಿಗಳು ಬಾಲಕಿಯ ಅಪಹರಣಕ್ಕೆ ಯತ್ನಿಸಿದ್ದು, ರಕ್ಷಣೆಗೆ ಧಾವಿಸಿದ ಬಾಲಕಿಯ ತಾಯಿಯನ್ನು ಯದ್ವಾತದ್ವಾ ಹೊಡೆದಿದ್ದಾರೆ. ಬಾಲಕಿ ಬೊಬ್ಬೆ ಹೊಡೆದ್ದರಿಂದ ಬಾಲಕಿಯ ಕಿವಿ ಕತ್ತರಿಸಿ ಪರಾರಿಯಾಗಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಜನವರಿ ನಾಲ್ಕರಂದು ಘಟನೆ ನಡೆದರೂ ಈವರೆಗೆ ಯಾರನ್ನೂ ಬಂಧಿಸಿಲ್ಲ. ಆದರೆ, ಭಾಗ್‌ಪತ್ ಸಂಸದ ಸತ್ಯಪಾಲ್ ಸಿಂಗ್ ಎಸ್ಪಿಯೊಂದಿಗೆ ಮಾತಾಡಿದ್ದೇನೆ ಅತ್ಯಾಚಾರ ಯತ್ನವೇ ನಡೆದಿಲ್ಲ ಎನ್ನುತ್ತಿದ್ದಾರೆ. ಘಟನೆ ನಡೆದ ಒಂದು ದಿನದ ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News