ಉತ್ತರಪ್ರದೇಶ ಚುನಾವಣೆ: ಬಿಎಸ್‌ಪಿ ಅಭ್ಯರ್ಥಿಗಳ ದ್ವಿತೀಯ ಪಟ್ಟಿ ಬಿಡುಗಡೆ

Update: 2017-01-06 14:07 GMT

ಲಕ್ನೊ, ಜ.6: ಮುಂಬರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 100 ಅಭ್ಯರ್ಥಿಗಳ ದ್ವಿತೀಯ ಪಟ್ಟಿಯನ್ನು ಬಿಎಸ್‌ಪಿ ಬಿಡುಗಡೆಗೊಳಿಸಿದ್ದು ಇದರಲ್ಲಿ 22 ಮಂದಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು.

ಗುರುವಾರ ಬಿಡುಗಡೆಗೊಳಿಸಿದ್ದ ಪ್ರಥಮ ಪಟ್ಟಿಯಲ್ಲಿ 100 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆಗೊಳಿಸಲಾಗಿತ್ತು. ಇದರಲ್ಲಿ 36 ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು. ಇದರೊಂದಿಗೆ 403 ಸದಸ್ಯ ಬಲವುಳ್ಳ ವಿಧಾನಸಭೆ ಸ್ಥಾನಕ್ಕೆ ಸ್ಪರ್ಧಿಸಲಿರುವ 200 ಅಭ್ಯರ್ಥಿಗಳ ಪಟ್ಟಿಯನ್ನು ಬಿಎಸ್‌ಪಿ ಬಿಡುಗಡೆ ಮಾಡಿದಂತಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News