×
Ad

ಪ್ರಧಾನಿ ಬದಲಾಗಲಿ: ಮಮತಾ

Update: 2017-01-06 23:05 IST

 ಹೊಸದಿಲ್ಲಿ,ಜ.6: ಕೇಂದ್ರ ಸರಕಾರದ ನೋಟು ರದ್ದತಿ ಕ್ರಮದಿಂದಾಗಿ ದೇಶದಲ್ಲಿಯ ಪ್ರಚಲಿತ ಸ್ಥಿತಿಗಾಗಿ ಮತ್ತು ಸಿಬಿಐನಿಂದ ಇಬ್ಬರು ಟಿಎಂಸಿ ನಾಯಕರ ಬಂಧನಕ್ಕಾಗಿ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದಾಳಿ ನಡೆಸಿದರು.

ರೋಸ್ ವ್ಯಾಲಿ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪ.ಬಂಗಾಲದ ಟಿಎಂಸಿ ಸಚಿವ ತಪಸ್ ಪಾಲ್ ಮತ್ತು ಲೋಕಸಭೆಯಲ್ಲಿ ಟಿಎಂಸಿ ನಾಯಕ ಸುದೀಪ್ ಬಂಡೋಪಾಧ್ಯಾಯ ಅವರನ್ನು ಸಿಬಿಐ ಬಂಧಿಸಿದೆ. ಪ್ರಚಲಿತ ಸ್ಥಿತಿಯಲ್ಲಿ ಬೇರೊಬ್ಬ ಬಿಜೆಪಿ ನಾಯಕನ ನೇತೃತ್ವದಲ್ಲಿ ರಾಷ್ಟ್ರೀಯ ಸರಕಾರವನ್ನು ರಚಿಸುವುದು ಅಗತ್ಯವಾಗಿದೆ. ಮೋದಿ ತೊಲಗಲೇಬೇಕು. ಆಡ್ವಾಣಿ, ರಾಜನಾಥ್ ಸಿಂಗ್ ಅಥವಾ ಅರುಣ್ ಜೇಟ್ಲಿ ಅವರು ರಾಷ್ಟ್ರೀಯ ಸರಕಾರದ ಪ್ರಧಾನಿಯಾಗಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದ ಮಮತಾ, ಈಗಿನ ಸ್ಥಿತಿಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದರು.
ಬಿಕ್ಕಟ್ಟಿನ ಸಮಯದಲ್ಲಿ ರಾಜಕೀಯ ಪಕ್ಷಗಳು ತಮ್ಮಿಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ರಚಿಸುವ ಸಮ್ಮಿಶ್ರ ಸರಕಾರವನ್ನು ರಾಷ್ಟ್ರೀಯ ಸರಕಾರವೆಂದು ಕರೆಯಲಾಗುತ್ತದೆ. 1931ರಲ್ಲಿ ಬ್ರಿಟನ್‌ನಲ್ಲಿ ರಾಮ್ಸೆ ಮೆಕ್‌ಡೊನಾಲ್ಡ್ ನೇತೃತ್ವದಲ್ಲಿ ರಾಷ್ಟ್ರೀಯ ಸರಕಾರವು ರಚನೆಯಾಗಿತ್ತು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News