ಚುನಾವಣಾ ಪ್ರಚಾರ ಮಾಡಲಿದ್ದಾರೆ ಟಿವಿ ಸೂಪರ್ ಸ್ಟಾರ್ ಕಪಿಲ್ ಶರ್ಮ!

Update: 2017-01-07 10:27 GMT

ಹೊಸದಿಲ್ಲಿ, ಜ.7: ಪಂಜಾಬ್ ರಾಜ್ಯದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಜನರಲ್ಲಿ ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮ ವಿನಂತಿಸಲಿದ್ದಾರೆ. ಆದರೆ ಅವರು ಯಾರ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆಂಬ ಕುತೂಹಲವೇ? ಅವರು ಯಾರ ಪರವಾಗಿಯೂ ಪ್ರಚಾರ ನಡೆಸುವುದಿಲ್ಲ. ವಾಸ್ತವವಾಗಿ ಚುನಾವಣಾ ಆಯೋಗವು ಪಂಜಾಬ್ ಜನರಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಪಿಲ್ ಶರ್ಮ ಅವರ ಸಹಾಯ ಯಾಚಿಸಿದೆ. ಕಪಿಲ್ ಶರ್ಮ ಆವರ ಜತೆ ಡಾ ಝೀಯಸ್‌ ಹಾಗೂ ಪಂಜಾಬಿ ನಟ ಹಾಗೂ ಕಾಮಿಡಿಯನ್ ಬಿನ್ನೊ ಡಿಲ್ಲನ್  ಕೂಡ ಈ ಜಾಗೃತಿ ಅಭಿಯಾನದ ಭಾಗವಾಗಲಿದ್ದಾರೆ.

ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ 25 ಸೆಕೆಂಡಿನ ವೀಡಿಯೊವೊಂದರ ರೆಕಾರ್ಡಿಂಗ್ ನಲ್ಲಿಯೂ ಕಪಿಲ್ ಭಾಗವಹಿಸಿದ್ದಾರೆ. ಈ ವೀಡಿಯೊವನ್ನು ಮೊಹಾಲಿಯಲ್ಲಿ ಚಿತ್ರೀಕರಿಸಲಾಗಿದೆ. ಈ ವೀಡಿಯೊವನ್ನು ಮತದಾರರಿಗೆ ಪ್ರದರ್ಶಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ 21ರ ಕೆಳಗಿನ ಹರೆಯದ ಹಾಕಿ ತಂಡದ ಕಪ್ತಾನ ಹರ್ಜೀತ್ ಸಿಂಗ್ ತುಲಿಯವರ ಚಿತ್ರವಿರುವ ಕೆಲ ಹೋರ್ಡಿಂಗುಗಳನ್ನೂ ಸಿದ್ಧಪಡಿಸಲಾಗಿದ್ದು, ಇವುಗಳನ್ನು ಮುಂದಿನ ದಿನಗಳಲ್ಲಿ ಉಪಯೋಗಿಸಲಾಗುವುದು. ಹರ್ಜೀತ್ ಸಿಂಗ್ ಅವರು ನಗರಕ್ಕೆ ಬರುವ ವಾಹನದಲ್ಲಿಯೂ ಈ ಪೋಸ್ಟರ್ ಅಳವಡಿಸಲಾಗುವುದು ಹಾಗೂ ಹೆಚ್ಚು ಜನರಿಗೆ ಅವರ ಸಂದೇಶ ತಲುಪುವಂತೆ ನೋಡಿಕೊಳ್ಳಲಾಗುವುದು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News