ದೇಶದ ಜನಸಂಖ್ಯೆ ಹೆಚ್ಚಳಕ್ಕೆ ಹಿಂದೂಗಳು ಕಾರಣರಲ್ಲ: ಸಾಕ್ಷಿ ಮಹಾರಾಜ್
Update: 2017-01-07 14:02 IST
ಹೊಸದಿಲ್ಲಿ, ಜ.7: "ದೇಶದಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ಹಿಂದೂಗಳು ಕಾರಣರಲ್ಲ. ನಾಲ್ಕು ಹೆಂಡತಿ ಮತ್ತು ಇಪ್ಪತ್ತು ಮಕ್ಕಳನ್ನು ಹೊಂದುವ ನೀತಿಯನ್ನು ಬೆಂಬಲಿಸುವವರು ಕಾರಣರು ” ಎಂದು ಬಿಜೆಪಿಯ ವಿವಾದಾಸ್ಪದ ಎಂಪಿ ಸಾಕ್ಷಿ ಮಹಾರಾಜ್ ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಉತ್ತರ ಪ್ರದೇಶದ ಚುನಾವಣೆಗೆ ಸಂಬಂಧಿಸಿ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಿದ ಮರುದಿನವೇ ಸಾಕ್ಷಿ ಮಹಾರಾಜ್ ಉತ್ತರ ಪ್ರದೇಶದದಲ್ಲಿ ದೇವಸ್ಥಾನವೊಂದರ ಉದ್ಘಾಟನಾ ಸಮಾರಂಭದಲ್ಲಿ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.
ತಾಯಿ ಮಕ್ಕಳನ್ನು ಹೆರುವ ಯಂತ್ರವಾಗಬಾರದು. ತಾಯಿ ಹಿಂದೂ ಅಥವಾ ಮುಸ್ಲಿಂ ಯಾರೇ ಆಗಲಿ. ನಾವು ತಾಯಿಗೆ ಗೌರವ ನೀಡಬೇಕು ಎಂದು ಹೇಳಿದ್ದಾರೆ.
ತ್ರಿಪ್ಪಲ್ ತಲಾಕ್ ಗೆ ವಿದಾಯ ಹೇಳುವ ಕಾಲ ಬಂದಿದೆ ಎಂದು ಹೇಳಿರುವ ಅವರು ಏಕನಾಗರಿಕ ಸಂಹಿತೆ ಕೂಡಲೇ ಜಾರಿಗೊಳಿಸುವಂತೆ ಸಾಕ್ಷಿ ಮಾಹಾರಾಜ್ ಆಗ್ರಹಿಸಿದ್ದಾರೆ.