×
Ad

ಆಮಿರ್ ಅನ್ನೇ ಹಿಂದಿಕ್ಕಿದ ಆಮಿರ್!

Update: 2017-01-08 17:19 IST

ಆಮಿರ್ ಖಾನ್ ಅವರ ‘ದಂಗಲ್ ’ಚಿತ್ರ ಈವರೆಗಿನ ಅತ್ಯಂತ ಹೆಚ್ಚು ಹಣ ಗಳಿಸಿದ ಹಿಂದಿ ಚಿತ್ರ ಎಂಬ ದಾಖಲೆಯನ್ನು ಮುಡಿಗೇರಿಸಿಕೊಂಡಿದೆ. ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆಯುವುದರಲ್ಲಿ ಆಮಿರ್ ಖಾನ್ ಅವರದೇ ‘ಪಿಕೆ ’ ಮತ್ತು ಸಲ್ಮಾನ್ ಖಾನ್ ಅವರ ‘ಭಜರಂಗಿ ಭಾಯಿಜಾನ್ ’ ಚಿತ್ರಗಳನ್ನು ದಂಗಲ್ ಹಿಂದಿಕ್ಕಿದೆ. ಅದು ಈವರೆಗೆ 342.18 ಕೋ.ರೂ.ಗಳಿಸಿದ್ದು, ಇದು ಬಾಲಿವುಡ್‌ನಲ್ಲಿ ಹಿಂದಿಚಿತ್ರವೊಂದರ ಸಾರ್ವಕಾಲಿಕ ದಾಖಲೆಯಾಗಿದೆ.

‘ದಂಗಲ್’ನ ದೈನಂದಿನ ಗಳಿಕೆಯ ವಿವರ ನೋಡಿ:

ಮೊದಲ ವಾರ

ದಿನ 1-ಡಿ.23: 29.78 ಕೋ.ರೂ.

ದಿನ 2-ಡಿ.24: 34.82 ಕೋ.ರೂ.

ದಿನ 3-ಡಿ.25: 42.35 ಕೋ.ರೂ.

ದಿನ 4-ಡಿ.26: 25.48 ಕೋ.ರೂ.

ದಿನ 5-ಡಿ.27: 23.07 ಕೋ.ರೂ.

ದಿನ 6-ಡಿ.28: 21.20 ಕೋ.ರೂ.

ದಿನ 7-ಡಿ.29: 20.29 ಕೋ.ರೂ.

ಎರಡನೇ ವಾರ

ದಿನ 8-ಡಿ.30: 18.59 ಕೋ.ರೂ.

ದಿನ 9-ಡಿ.31: 23.07 ಕೋ.ರೂ.

ದಿನ 10-ಜ.1: 31.27 ಕೋ.ರೂ.

ದಿನ 11-ಜ.2: 13.45 ಕೋ.ರೂ.

ದಿನ 12-ಜ.3: 12 ಕೋ.ರೂ.

ದಿನ 13-ಜ.4: 9.23 ಕೋ.ರೂ.

ದಿನ 14-ಜ.5: 9.12 ಕೋ.ರೂ.

ದಿನ 15-ಜ.6: 6.66 ಕೋ.ರೂ.

ದಿನ 16-ಜ.7: 10.80 ಕೋ.ರೂ

ದಿನ 17 ಜ.8: 11 ಕೋ.ರೂ.

17 ದಿನಗಳಲ್ಲಿ ಒಟ್ಟು 342.18 ಕೋ.ರೂ.ಗಳಿಕೆ

ನಿತೇಶ್ ತಿವಾರಿ ನಿರ್ದೇಶನದ ‘ದಂಗಲ್’ ತನ್ನ ಪುತ್ರಿಯರಾದ ಗೀತಾ ಫೋಗಟ್ ಮತ್ತು ಬಬಿತಾ ಕುಮಾರಿ ಅವರನ್ನು ವಿಶ್ವದರ್ಜೆಯ ಕುಸ್ತಿಪಟುಗಳಾಗಿ ತರಬೇತುಗೊಳಿಸಿದ ಹರ್ಯಾಣದ ಕುಸ್ತಿಪಟು ಮಹಾವೀರ ಸಿಂಗ್ ಫೋಗಟ್ ಅವರ ಜೀವನದ ಸತ್ಯಕಥೆಯನ್ನು ಆಧರಿಸಿದೆ.

ಮಹಾವೀರ ಆಗಿ ಆಮಿರ್,ಗೀತಾ ಫೋಗಟ್ ಆಗಿ ಝೈರಾ ವಾಸಿಂ/ಫಾತಿಮಾ ಸನಾ ಶೇಖ್ ಮತ್ತು ಬಬಿತಾ ಕುಮಾರಿ ಆಗಿ ಸುಹಾನಿ ಭಟ್ನಾಗರ್/ಸಾನ್ಯಾ ಮಲ್ಹೋತ್ರಾ ಅವರ ಅಭಿನಯವು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

 ಹೊಸವರ್ಷದಲ್ಲಿ ‘ದಂಗಲ್’ ಮತ್ತು ಸಲ್ಮಾನ್ ಅವರ ‘ಸುಲ್ತಾನ್’ ನಡುವೆ ಭಾರೀ ಸ್ಪರ್ಧೆಯನ್ನು ಅಭಿಮಾನಿಗಳು ಮತ್ತು ಚಿತ್ರರಂಗದ ಪಂಡಿತರು ನಿರೀಕ್ಷಿಸಿದ್ದರು. ಇವೆರಡೂ ಚಿತ್ರಗಳ ವಿಷಯ ಕುಸ್ತಿಯೇ ಆಗಿದ್ದರಿಂದ ಸಹಜವಾಗಿಯೇ ಯಾವ ಚಿತ್ರವು ಮೇಲುಗೈ ಸಾಧಿಸಬಹುದು ಎಂಬ ಕುತೂಹಲವಿತ್ತು. ಆದರೆ ‘ಸುಲ್ತಾನ್ ’ಕೇವಲ 306 ಕೋ.ರೂ.ಗಳಿಸುವಲ್ಲಿ ಸುಸ್ತಾಗಿದ್ದು, ‘ದಂಗಲ್ ’ ಅದನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ. ಬಹುಶಃ ಆಮಿರ್‌ಗೆ ಬಾಲಿವುಡ್‌ನ ನೂತನ ಸುಲ್ತಾನ್ ಎಂದು ಪಟ್ಟಾಭಿಷೇಕ ಮಾಡುವ ಸಮಯವೀಗ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News