×
Ad

​ಬರೇಲಿಯಲ್ಲಿ ಖಾಸಗಿ-ಸರಕಾರಿ ಬಸ್ ಗಳ ಡಿಕ್ಕಿ; 6ಸಾವು

Update: 2017-01-10 12:55 IST

ಬರೇಲಿ, ಜ.10: ಉತ್ತರ ಪ್ರದೇಶದ ಬರೇಲಿಯಲ್ಲಿ  ರಸ್ತೆ ಬದಿ ನಿಂತಿದ್ದ ಖಾಸಗಿ ಬಸ್‌ಗೆ ಸರಕಾರಿ  ಬಸ್ ಡಿಕ್ಕಿ ಡಿಕ್ಕಿ ಹೊಡೆದ ಪರಿಣಾಮವಾಗಿ  ಕನಿಷ್ಠ 6 ಮಂದಿ ಮೃತಪಟ್ಟು  30 ಮಂದಿ ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

 ರಾಷ್ಟ್ರೀಯ ಹೆದ್ದಾರಿ 24ರ ಫತೇಹ್‌ ಗುಂಜ್ ಎಂಬಲ್ಲಿ ನಿಂತಿದ್ದ ಖಾಸಗಿ ಬಸ್‌ಗೆ ಸರಕಾರಿ  ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ  ಬಸ್ ನಲ್ಲಿದ್ದ ಇಬ್ಬರು ಮಕ್ಕಳು  ಸೇರಿದಂತೆ 6 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಹತ್ತಿರದ  ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿಗಳು  ಸ್ಥಳಕ್ಕೆ ಧಾವಿಸಿದ್ದು, ಪೊಲೀಸರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News