×
Ad

ವೈರಲ್ ವೀಡಿಯೊದಲ್ಲಿದ್ದ ತನ್ನ ಯೋಧನ ಬಗ್ಗೆ ಬಿಎಸ್ ಎಫ್ ಹೇಳಿಕೆ ಇದು!

Update: 2017-01-10 14:29 IST

ಹೊಸದಿಲ್ಲಿ, ಜ.10: ಗಡಿ ಕಾಯುವ ಯೋಧರಿಗೆ ಬಿಎಸ್‌ ಎಫ್ ಎಫ್‌ ನೀಡುತ್ತಿರುವ ಆಹಾರ ಬಗ್ಗೆ ಮಾಹಿತಿಯನ್ನು    ಓರ್ವ ಯೋಧ ವೀಡಿಯೋ ಮೂಲಕ ತೆರೆದಿಟ್ಟಿದ್ದಾರೆ.ಇದು ಸಂಘರ್ಷಕ್ಕೆ ಕಾರಣವಾಗಿದೆ.
ವೀಡಿಯೊದಲ್ಲಿ ಬೆಳಕು ಚೆಲ್ಲಿರುವ ಬಿಎಸ್‌‌ಎಫ್‌ ಯೋಧ ತೇಜ್ ಬಹದ್ದೂರ್ ಯಾದವ್‌  ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಎಸ್ ಎಫ್ " ಆತನ ವರ್ತನೆ ಸರಿ ಇಲ್ಲ. ಆಗಾಗ ಆತ ಕರ್ತವ್ಯಕ್ಕೆ ಗೈರು ಹಾಜರಾಗುತ್ತಿದ್ದ, ಮಧ್ಯ ಸೇವಿಸುತ್ತಿದ್ದ , ಮೇಲಾಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ” ಎಂದು ಬಿಎಸ್ ಎಫ್‌ ಹೇಳಿಕೆ ನೀಡಿದೆ. 
ಬಿಎಸ್ ಎಫ್‌ ಪ್ರಕರಣದ ಬಗ್ಗೆ  ಪಾರದರ್ಶಕ ತನಿಖೆಗೆ  ಆದೇಶ ನೀಡಿದೆ. 
ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಗಡಿ ರಕ್ಷಣೆಗೆ ನಿಯೋಜನೆಗೊಂಡಿರುವ  ಬಿಎಸ್‌‌ಎಫ್‌ ಯೋಧ ತೇಜ್ ಬಹದ್ದೂರ್ ಯಾದವ್‌  ಯೋಧರ ಸ್ಥಿತಿ ಗತಿಯ ಬಗ್ಗೆ ವೀಡಿಯೋದಲ್ಲಿ ಬೆಳಕು ಚೆಲ್ಲಿದ್ದರು ಇದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್‌ ಆಗಿತ್ತು.
 ಬಿಎಸ್‌‌ಎಫ್‌ ಯೋಧ ತೇಜ್ ಬಹದ್ದೂರ್ ಯಾದವ್‌  ಇಂಡಿಯಾ ಟುಡೇಗೆ ನೀಡಿರುವ ಸಂದರ್ಶನದಲ್ಲಿ ನನಗೆ ಬೇರೆ ದಾರಿ ಇಲ್ಲದ ಕಾರಣದಿಂದಾಗಿ ಈ ರೀತಿ ಮಾಡಿದೆ. ಮೇಲಾಧಿಕಾರಿಗಳ ಗಮನ ಸೆಳೆದಿದ್ದರೂ ಪ್ರಯೋಜನವಾಗಿರಿಲ್ಲ. ಈ ಕಾರಣದಿಂದಾಗಿ ಸಾಮಾಜಿಕ ಜಾಲಾ ತಾಣಗಳ  ಮೊರೆ ಹೋಗಿದ್ದೆ ಎಂದು ಹೇಳಿದ್ದಾರೆ.
" ನಾನೇನು ತಪ್ಪು ಮಾಡಿಲ್ಲ. ನಾನು ನೈಜ ಸ್ಥಿತಿಯನ್ನು ವೀಡಿಯೊದಲ್ಲಿ ವಿವರಿಸಿದ್ದೆ. ನನ್ನ ಕೆಲಸ ಹೋದರೂ ಚಿಂತೆ ಇಲ್ಲ.  ನನ್ನಿಂದಾಗಿ ಸೈನಿಕರಿಗೆ ಪ್ರಯೋಜನವಾಗುವುದಿದ್ದರೆ  ನಾನು ಹೋರಾಟಕ್ಕೆ ತಯಾರಿದ್ದೇನೆ" ಎಂದು ಹೇಳಿದ್ದಾರೆ.
"ವೀಡಿಯೊ ಮೂಲಕ ಕಷ್ಟವನ್ನು   ತೆರೆದಿಟ್ಟ ಬಳಿಕ ತನ್ನನ್ನು ಬೇರೆ ಕೆಲಸಕ್ಕೆ ನಿಯೋಜಿಸಲಾಗಿದೆ. ಫೇಸ್ ಬುಕ್ ನಿಂದ ವೀಡಿಯೊವನ್ನು ಅಳಿಸಿ ಹಾಕುವಂತೆ ಮೇಲಾಧಿಕಾರಿಗಳು ಒತ್ತಡ ಹೇರಿದ್ದಾರೆ" ಎಂದು   ಯೋಧ  ತೇಜ್ ಬಹದ್ದೂರ್ ಯಾದವ್‌  ಮಾಹಿತಿ ನೀಡಿದ್ದಾರೆ.
ಯೋಧ ತೇಜ್ ಬಹದ್ದೂರ್ ಯಾದವ್‌   ವೀಡಿಯೊದಲ್ಲಿ "ನಾವು ಬೆಳಗಿನ ಉಪಾಹಾರದ ರೀತಿಯಲ್ಲಿ ಪರೋಟಾ ಮತ್ತು ಟೀ ಪಡೆಯುತ್ತೇವೆ. ಆದರೆ, ಪರೋಟಾ ಜೊತೆಗೆ ಯಾವುದೇ ಉಪ್ಪಿನಕಾಯಿ ಅಥವಾ ತರಕಾರಿ ಇರುವುದಿಲ್ಲ. ನಾವು ಕರ್ತವ್ಯದ ಸಮಯದಲ್ಲಿ ಸತತ 11 ಗಂಟೆಗಳ ಕಾಲ ನಿಲ್ಲುತ್ತೇವೆ. ಮಧ್ಯಾಹ್ನ ಊಟಕ್ಕೆ ರೊಟ್ಟಿ ಜೊತೆ ಬೇಳೆ ಸಾರು ಪಡೆಯುತ್ತೇವೆ. ಆದರೆ, ಸಾರಿನಲ್ಲಿ ಅರಿಶಿನ ಹಾಗೂ ಉಪ್ಪು ಬಿಟ್ಟರೆ ಬೇರೇನು ಇರಲ್ಲ. ಇಂತಹ ಕಳಪೆ ಆಹಾರ  ಸೇವಿಸಿ ಸೈನಿಕರು ಹೇಗೆ ಕರ್ತವ್ಯ ನಿರ್ವಹಿಸಲು ಸಾಧ್ಯ" ಎಂದು ಪ್ರಶ್ನಿಸಿದ್ದರು.. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News