×
Ad

ಈ ತಾಯಿ ಬಡತನದ ಬೇಗೆ ನೀಗಿಸಿಕೊಂಡದ್ದು ಹೇಗೆ?

Update: 2017-01-11 09:19 IST

ಭುವನೇಶ್ವರ, ಜ.11: ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಅನಿವಾರ್ಯವಾಗಿ ನವಜಾತ ಶಿಶುವನ್ನು ಮಾರಾಟ ಮಾಡಬೇಕಾದ ಸ್ಥಿತಿಗೆ ಸಿಕ್ಕಿಹಾಕಿಕೊಂಡ ಹೃದಯ ವಿದ್ರಾವಕ ಘಟನೆ ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಇದೀಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿ, ಜಿಲ್ಲಾಧಿಕಾರಿಗೆ ನೋಟಸ್ ನೀಡಿದೆ. ಮಾನವಹಕ್ಕು ಸಂಘಟನೆಯ ವರದಿ ಆಧಾರದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಎನ್‌ಎಚ್‌ಆರ್‌ಸಿ, ನಿರ್ಗತಿಕ ಮಹಿಳೆ ತನ್ನ ನೆರೆಮನೆಯವರಿಗೆ ಶಿಶುವನ್ನು 2,000 ರೂಪಾಯಿಗೆ ಮಾರಾಟ ಮಾಡಿದ ಬಗ್ಗೆ ತನಿಖೆ ನಡೆಸುತ್ತಿದೆ.

"ಯಾವ ಸರ್ಕಾರಿ ಯೋಜನೆಯ ಲಾಭವೂ ಸಿಗದ ಕಾರಣದಿಂದ ಬಡತನದ ಬೇಗೆ ತಾಳಲಾಗದೇ ಈ ಮಹಿಳೆ ತನ್ನ ಶಿಶುವನ್ನೇ ಮಾರಾಟ ಮಾಡಬೇಕಾಯಿತು. ಮಹಿಳೆಗೆ ಇತರ ಇಬ್ಬರು ಮಕ್ಕಳಿದ್ದು, ಗಂಡ ತೊರೆದಿದ್ದಾನೆ" ಎಂದು ಎನ್‌ಎಚ್‌ಆರ್‌ಸಿ ಹೇಳಿಕೆ ಸ್ಪಷ್ಟಪಡಿಸಿದೆ.

ಈ ಬಗ್ಗೆ ನಾಲ್ಕು ವಾರದ ಒಳಗಾಗಿ ವರದಿ ನೀಡುವಂತೆ ಹಾಗೂ ಮಹಿಳೆಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News