×
Ad

ವಂಚನೆ ವೀರ ಅಶ್ರಫ್ ಖಾನ್ ಬಂಧನ

Update: 2017-01-11 12:56 IST

ಮಂಜೇರಿ, ಜ. 11: ಹಲವಾರು ವಂಚನೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಹರಿಪ್ಪಾಡ್ ಅಶ್ರಫ್ ಖಾನ್ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ಮುಖ್ಯಸ್ಥರ ನಿರ್ದೇಶದಂತೆ ರೂಪಿಸಲಾದ ಸ್ಪೆಷಲ್ ಸ್ಕ್ವಾಡ್ ಮಂಜೇರಿಯಿಂದ ಆರೋಪಿಯನ್ನು ಬಂಧಿಸಿದೆ.

ಪತ್ತನಂತಿಟ್ಟ ಪೊಲೀಸ್ ಠಾಣೆಯಲ್ಲಿ ನಾಲ್ಕು ವಂಚನೆ ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ. ಎರ್ನಾಕುಲಂ ಉತ್ತರ ಪೊಲೀಸ್ ಠಾಣೆಯಲ್ಲಿ ಈತ ವಿರುದ್ಧ 14 ವಂಚನೆ ಪ್ರಕರಣಗಳು ದಾಖಲಾಗಿವೆ. ಕೇರಳದ ಇತರ ಜಿಲ್ಲೆಗಳಲ್ಲಿ ಈತನ ವಿರುದ್ಧ ಹಲವಾರು ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News