ಸಾಕ್ಷಿ ಮಹಾರಾಜ್ ಗೆ ಚುನಾವಣಾ ಆಯೋಗದ ನೋಟಿಸ್
Update: 2017-01-11 14:08 IST
ಹೊಸದಿಲ್ಲಿ,ಜ.11: ಭಾರತದ ಜನಸಂಖ್ಯಾ ಹೆಚ್ಚಳಕ್ಕೆ ಮುಸ್ಲಿಮರೇ ಕಾರಣ ಎಂದುಟೀಕಿಸಿದ್ದ ಬಿಜೆಪಿ ಸಂಸದ ಸಾಕ್ಷಿಮಹಾರಾಜ್‌ಗೆ ಚುನಾವಣಾ ಆಯೋಗ ನೋಟಿಸು ಕಳುಹಿಸಿದೆ. ಧಾರ್ಮಿಕ ಸ್ಪರ್ಧೆಹುಟ್ಟುಹಾಕುವ ರೀತಿಯಲ್ಲಿ ಮಾತಾಡಿದ್ದಾರೆಂದು ದೂರು ಬಂದ ಹಿನ್ನೆಲೆಯಲ್ಲಿ ಆಯೋಗ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಮೇಲ್ನೋಟಕ್ಕೆ ಸಾಬೀತಾದ್ದರಿಂದ ಚುನಾವಣಾ ಆಯೋಗ ನೋಟಿಸ್ ಕಳುಹಿಸಿದೆ. ಉತ್ತರ ಪ್ರದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ.
ದ್ವೇಷಕಾರುವ ಭಾಷಣ ಪರಿಣತಸಾಕ್ಷಿ ವಿರುದ್ಧ, ಮೀರತ್‌ನ ಕಾರ್ಯಕ್ರಮ ಆಯೋಜಕರ ವಿರುದ್ಧ ಪೊಲೀಸ್ ಕೇಸು ದಾಖಲಾಗಿದೆ. ಘಟನೆಯ ಕುರಿತ ವೀಡಿಯೊಸಹಿತ ಪುರಾವೆಗಳನ್ನು ಹಾಜರು ಪಡಿಸಲು ಚುನಾವಣಾ ಆಯೋಗ ಆದೇಶಿಸಿದೆ. ಮೀರತ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಸಾಕ್ಷಿ ಮುಸ್ಲಿಮರ ವಿರುದ್ಧ ಹರಿಹಾಯ್ದು ದೇಶದ ಜನಸಂಖ್ಯೆ ಹೆಚ್ಚಳಕ್ಕೆ ಮುಸ್ಲಿಮರೇ ಕಾರಣ ಎಂದು ಗುಡುಗಿದ್ದರು. ಇದು ಈಗ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದೆ ಎಂದು ವರದಿಯಾಗಿದೆ.