ಮಕ್ಕಳ ಹೆಸರಿಗೆ ನಿಧಿ ಅಕ್ರಮ ವರ್ಗಾವಣೆ: ಮೂರು ವಾರದೊಳಗೆ ಉತ್ತರಿಸಲು ಮಲ್ಯಗೆ ಸುಪ್ರೀಂ ಸೂಚನೆ

Update: 2017-01-11 14:53 GMT

ಹೊಸದಿಲ್ಲಿ, ಜ.11: ಮದ್ಯ ದೊರೆ ವಿಜಯ ಮಲ್ಯ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ 40 ಮಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಮೊತ್ತವನ್ನು ತನ್ನ ಮಕ್ಕಳ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು ಬ್ಯಾಂಕ್‌ಗಳು ಮಾಡಿರುವ ಆರೋಪದ ಬಗ್ಗೆ ಮೂರು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.

 ಸ್ಟೇಟ್ ಬ್ಯಾಂಕ್ ನೇತೃತ್ವದಲ್ಲಿ ಬ್ಯಾಂಕ್‌ಗಳ ಒಕ್ಕೂಟವು ಸಲ್ಲಿಸಿರುವ ಅರ್ಜಿ ಬಗ್ಗೆ ಅಫಿದಾವಿತ್ ದಾಖಲಿಸುವಂತೆ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಮತ್ತು ಎ.ಎಂ.ಖಾನ್ವಿಲ್ಕರ್ ಅವರನ್ನೊಳಗೊಂಡ ಪೀಠವೊಂದು ಸೂಚಿಸಿ,ಫೆ.2ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಗೊಳಿಸಿತು.

    ಸಾಲ ವಸೂಲಾತಿ ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಉಲ್ಲಂಘಿಸಿ ವಿಜಯ ಮಲ್ಯ 40 ಮಿಲಿಯನ್ ಡಾಲರ್‌ನಷ್ಟು ಮೊತ್ತವನ್ನು ತನ್ನ ಮಕ್ಕಳ ಹೆಸರಿಗೆ ವರ್ಗಾಯಿಸಿದ್ದರು ಎಂದು ಬ್ಯಾಂಕ್ ಪರ ವಕೀಲ ಶ್ಯಾಮ್‌ದಿವಾನ್ ಆರೋಪಿಸಿದರು. ಮಲ್ಯ ಮತ್ತವರ ಸಂಸ್ಥೆಗಳು ಬ್ಯಾಂಕ್‌ಗಳಿಗೆ ಸುಮಾರು 6,200 ಕೋಟಿ ರೂ.ನಷ್ಟು ಸಾಲ ಬಾಕಿ ಇರಿಸಿದ್ದ ಕಾರಣ 40 ಮಿಲಿಯನ್ ಡಾಲರ್ ಮೊತ್ತವನ್ನು ಹೊಸದಿಲ್ಲಿಯಲ್ಲಿ ಠೇವಣಿ ಇರಿಸಬೇಕು ಎಂದವರು ವಾದಿಸಿದರು.

ಇದಕ್ಕೆ ಉತ್ತರಿಸಲು ಕಾಲಾವಕಾಶ ಬೇಕೆಂದು ಮಲ್ಯ ಪರ ವಕೀಲ ಸಿ.ಎಸ್.ವೈದ್ಯನಾಥನ್ ಮಾಡಿದ ಮನವಿಯನ್ನು ಕೋರ್ಟ್ ಪುರಸ್ಕರಿಸಿತು. ದೇಶದ ಹೊರಗೆ ತನಗಿರುವ ಆಸ್ತಿಯ ಬಗ್ಗೆ ಸಂಪೂರ್ಣ ವಿವರವನ್ನು ಒಂದು ತಿಂಗಳೊಳಗೆ ಸಲ್ಲಿಸುವಂತೆ ವಿಜಯ್ ಮಲ್ಯಾಗೆ ಕಳೆದ ಅಕ್ಟೋಬರ್‌ನಲ್ಲಿ ಕೋರ್ಟ್ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News