×
Ad

ಜಲ್ಲಿಕಟ್ಟು ನಿಷೇಧ ತೆರವಿಗೆ ಸುಪ್ರೀಂಕೋರ್ಟ್ ನಕಾರ

Update: 2017-01-12 12:43 IST

ಹೊಸದಿಲ್ಲಿ, ಜ.12: ಪ್ರತಿವರ್ಷ ಸಂಕ್ರಾಂತಿಯಲ್ಲಿ ನಡೆಯುವ ಜಾನಪದ ಕ್ರೀಡೆ ‘ಜಲ್ಲಿಕಟ್ಟು’ವಿರುದ್ಧ ಹೇರಲಾಗಿರುವ ನಿಷೇಧ ತೆರವುಗೊಳಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಸುಪ್ರೀಂಕೋರ್ಟ್‌ನ ಈ ತೀರ್ಪು ತಮಿಳುನಾಡಿಗೆ ತೀವ್ರ ಹಿನ್ನಡೆಯಾಗಿ ಪರಿಗಣಿಸಿದೆ.

ಜಲ್ಲಿಕಟ್ಟುವಿಗೆ ಹೇರಲಾಗಿರುವ ನಿಷೇಧ ತೆರವಿಗೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್, ಜಲ್ಲಿಕಟ್ಟು ಒಂದು ಅಸಂಬದ್ಧ ಕ್ರೀಡೆ ಎಂದು ಹೇಳಿದೆ.

ಜಲ್ಲಿಕಟ್ಟುವಿಗೆ ಸುಪ್ರೀಂಕೋರ್ಟ್ ನಿಷೇಧ ಹೇರಿರುವ ಕಾರಣ ಕಳೆದ ಎರಡು ವರ್ಷಗಳಿಂದ ಇದು ತಮಿಳುನಾಡಿನಲ್ಲಿ ನಡೆಯುತ್ತಿಲ್ಲ. ಪೊಂಗಲ್ ಸಂಭ್ರಮದಲ್ಲಿ ನಡೆಯುವ ಈ ಕ್ರೀಡೆಯ ಬಗ್ಗೆ ಪ್ರಾಣಿ ದಯಾ ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ಜಲ್ಲಿಕಟ್ಟುವಿನ ವೇಳೆ ಗೂಳಿಗಳಿಗೆ ಹಿಂಸೆ ನೀಡಲಾಗುತ್ತದೆ ಎಂದು ಪ್ರಾಣಿ ದಯಾ ಸಂಘಟನೆ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News