×
Ad

ಜೆಪಿ ಸೇನಾನಿ ಲಾಲು ಪ್ರಸಾದ್ ಯಾದವ್‌ಗೆ 10,000 ನಿವೃತ್ತಿವೇತನ ಮಂಜೂರು !

Update: 2017-01-12 16:53 IST

ಪಾಟ್ನ,ಜ.11: ಬಿಹಾರ ಮಾಜಿ ಮುಖ್ಯಮಂತ್ರಿ ಲಾಲುಪ್ರಸಾದ್ ಯಾದವ್‌ರಿಗೆ 10,000ರೂಪಾಯಿ ನಿವೃತ್ತಿವೇತನ ನೀಡಲು ಬಿಹಾರ ಸರಕಾರ ತೀರ್ಮಾನಿಸಿದೆ. ತುರ್ತುಪರಿಸ್ಥಿತಿವೇಳೆ ಜೈಲುಪಾಲದವರಿಗೆ ಬಿಹಾರ ಸರಕಾರ ಹತ್ತು ಸಾವಿರ ರೂಪಾಯಿ ಪೆನ್ಶನ್ ನೀಡುತ್ತಿದೆ. ಈ ಯೋಜನೆಯಲ್ಲಿ ತನಗೆ ಪೆನ್ಶನ್ ಕೊಡಬೇಕೆಂದು ಲಾಲು ಪ್ರಸಾದ್ ಯಾದವ್ ಅರ್ಜಿ ಹಾಕಿದ್ದರು. ಅರ್ಜಿಯನ್ನು ಸರಕಾರ ಪುರಸ್ಕರಿಸಿದ್ದು, 10ಸಾವಿರ ರೂಪಾಯಿ ನಿವೃತ್ತಿವೇತನ ಘೋಷಿಸಿದೆ. ಬಿಹಾರ ನಿತೀಶ್‌ಕುಮಾರ್ ಸರಕಾರದಲ್ಲಿ ಲಾಲೂರ ಆರ್‌ಜೆಡಿ ಪಾಲುದಾರ ಪಕ್ಷವಾಗಿದೆ. ಎರಡು ಸಲ ಮುಖ್ಯಮಂತ್ರಿಯಾಗಿದ್ದ ಲಾಲು ಜೆಪಿ ಸೇನಾನಿ ಸಮ್ಮಾನ್ ಯೋಜನೆಯ ಪ್ರಕಾರ ನಿವೃತ್ತಿವೇತನಕ್ಕೆ ಅರ್ಹರಾಗಿದ್ದಾರೆ. ತುರ್ತು ಪರಿಸ್ಥಿತಿ ಕಾಲದಲ್ಲಿ ಅವರು ಜೈಲಲ್ಲಿದ್ದರು. ತುರ್ತು ಪರಿಸ್ಥಿತಿ ಕಾಲದಲ್ಲಿ ಜೈಲುವಾಸ ಅನುಭವಿಸಿದವರಿಗೆ ನಿವೃತ್ತಿವೇತನ ನೀಡುವ ಯೋಜನೆಯನ್ನು 2009ರಲ್ಲಿ ಆರಂಭಿಸಲಾಗಿತ್ತು. 2015ರ ಕಾನೂನು ತಿದ್ದುಪಡಿ ಪ್ರಕಾರ ಲಾಲೂರಿಗೆ ಪೆನ್ಶನ್ ಅರ್ಹತೆ ಇದೆಎಂದು ಬಿಹಾರ ಸರಕಾರ ಹೇಳಿದೆ. ತುರ್ತುಪರಿಸ್ಥಿತಿಯಲ್ಲಿ ಐದುತಿಂಗಳು ಜೈಲಲಿದ್ದವರಿಗೆ ಪ್ರತಿ ತಿಂಗಳು ಐದು ಸಾವಿರ ರೂಪಾಯಿ,ಹಾಗೂ ಐದು ತಿಂಗಳಿಗಿಂತ ಹೆಚ್ಚು ಜೆಲಲ್ಲಿದ್ದವರಿಗೆ ಹತ್ತು ಸಾವಿರ ರೂಪಾಯಿ ಈ ಯೋಜನೆಯಲ್ಲಿ ನೀಡಲಾಗುತ್ತಿದೆ. ಯೋಜನೆ ಪ್ರಕಾರ ಬಿಹಾರದಲ್ಲಿ ಒಟ್ಟು 3,100 ಮಂದಿಗೆ ಪೆನ್ಶನ್ ಸಿಗುತ್ತಿದೆ. ಇದರಲ್ಲಿ ಲಾಲೂ ಪ್ರಸಾದ್ ಯಾದವ್, ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಕೂಡ ಸೇರಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News