ಎಸ್‌ಎಫ್‌ಐಗೆ ವಿರುದ್ಧ ಕೆಲಸ ಮಾಡುವೆಯಾ ಎಂದು ಕೇಳಿ ಎಂಫಿಲ್ ವಿದ್ಯಾರ್ಥಿಗೆ ಮಾರಕ ಹಲ್ಲೆ
ಕೋಟ್ಟಯಂ,ಜ.12: ಕೇರಳ ಕೋಟ್ಟಯಂ ಎಂಜಿ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಎಂಫಿಲ್ ವಿದ್ಯಾರ್ಥಿಗೆ ಎಸ್ ಎಫ್ ಐ ಕಾರ್ಯಕರ್ತರು ಮಾರಕ ಹಲ್ಲೆನಡೆಸಿದ ಘಟನೆ ನಡೆದಿದೆ. ಸ್ಕೂಲ್ ಆಫ್ ಗಾಂಧಿಯನ್ ಥಾಟ್ಸ್‌ನ ಸಂಶೋಧನ ವಿದ್ಯಾರ್ಥಿ ಕಾಲಡಿ ವಿವೇಕ್ ಕುಮಾರ್ ಎಸ್‌ಎಫ್‌ಐ ಕಾರ್ಯಕರ್ತರಿಂದ ಗಂಭೀರ ಗಾಯಗೊಂಡಿದ್ದು, ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸರ್ಜಿಕಲ್ ವಿಭಾಗಕ್ಕೆ ದಾಖಲಿಸಲಾಗಿದೆ. ಗಾಂಧಿ ನಗರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಕಳೆದ ದಿವಸ ರಾತ್ರಿ ಹನ್ನೆರಡು ಗಂಟೆಗೆ ಕ್ಯಾಂಪಸ್‌ನ ಪಲ್ಪನ ಹಾಸ್ಟೆಲ್‌ನಲ್ಲಿ ಘಟನೆ ನಡೆದಿದೆ ಎಂದು ವಿವೇಕ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಒಂದು ಗುಂಪು ಅಂಬೇಡ್ಕರ್ ಸ್ಟೂಡೆಂಟ್ಸ್ ಮೂವ್‌ಮೆಂಟ್‌ನಲ್ಲಿ ಸೇರಿ ಕೆಲಸ ಮಾಡಿದ್ದು ಎಸ್‌ಎಫ್‌ಐ ಕಾರ್ಯಕರ್ತರನ್ನು ಕೋಪಿಸುವಂತೆ ಮಾಡಿತ್ತು. ನಿನ್ನೆ ರಾತ್ರಿ ತನ್ನ ಕೋಣೆಗೆ ಎಸ್‌ಎಫ್ ಐ ಘಟಕ ಕಾರ್ಯದರ್ಶಿ ನೇತೃತ್ವದಲ್ಲಿ ನಾಲ್ವರ ತಂಡ ಬಂದು ಹಲ್ಲೆ ನಡೆಸಿದೆ ಎಂದು ವಿವೇಕ್ ಪೊಲೀಸರಿಗೆ ತಿಳಿಸಿದ್ದಾನೆ. ತಂಡ ಮಾರಕ ಆಯುಧಗಳನ್ನು ಹೊಂದಿತ್ತು. ಎಸ್‌ಎಫ್‌ಐಗೆ ವಿರುದ್ಧ ಕೆಲಸಮಾಡುವೆಯಾ ಎಂದು ಕೇಳಿ ತಂಡ ವಿವೇಕ್‌ನಿಗೆ ಮಾರಕವಾಗಿ ಹಲ್ಲೆ ನಡೆಸಿದೆ ಪ್ರಜ್ಞೆ ಕಳಕೊಂಡಿದ್ದ ವಿವೇಕ್‌ನನ್ನು ಹತ್ತಿರದ ಕೋಣೆಯ ಇತರ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆಂದು ವರದಿ ತಿಳಿಸಿದೆ.