ರಾಷ್ಟ್ರಗೀತೆ ಜಾರ್ಜ್‌ದೊರೆಯ ಸಿಂಹಾಸನಾರೋಹಣ ಸ್ತುತಿಸಿ ಬರೆಯಲಾಗಿದೆ: ಇತಿಹಾಸ ತಜ್ಞ ಎಂಜಿಎಸ್ ನಾರಾಯಣನ್
ಕಲ್ಲಿಕೋಟೆ,ಜ.12: ಇಂಗ್ಲೆಂಡ್‌ನ ದೊರೆ ಐದನೇ ಜಾರ್ಜ್‌ರನ್ನು ಪ್ರಶಂಸಿ ರವೀಂದ್ರನಾಥ್ ಠಾಗೋರ್ ರಾಷ್ಟ್ರಗೀತೆಯನ್ನು ಬರೆದಿದ್ದಾರೆ. ಈಗ ಭಾರತ ಇದನ್ನೇ ರಾಷ್ಟ್ರಗೀತೆಯನ್ನಾಗಿಸಿದೆ ಎಂದು ಖ್ಯಾತ ಇತಿಹಾಸ ತಜ್ಞ ಹಾಗು ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ನ ಮಾಜಿ ಅಧ್ಯಕ್ಷ ಎಂಜಿಎಸ್ ನಾರಾಯಣನ್ ಹೇಳಿದ್ದಾರೆ. ಇಲ್ಲಿನ ಪೊಲೀಸ್ ಕ್ಲಬ್‌ನಲ್ಲಿ ಧರ್ಮಮತ್ತು ರಾಷ್ಟ್ರೀಯತೆ ಎಂಬ ಭಾಷಣ ಸರಣಿಯಲ್ಲಿ ಅವರು ಮಾತಾಡುತ್ತಿದ್ದರು. ಜನಗಣಮನ ಎಂದರೆ ಐದನೆ ಜಾರ್ಜ್ ಆಗಿದ್ದಾರೆ. ಸುಮಾರು 1960ರವರೆಗೆ ವಂದೇ ಮಾತರಂನ್ನು ರಾಷ್ಟ್ರಗೀತೆಯಾಗಿ ಹಾಡಲಾಗಿತ್ತು. ಇದನ್ನು ಬದಲಿಸಿದ್ದರ ಹಿಂದೆ ರಾಜಕೀಯ ಕಾರಣಗಳಿರಬಹುದು.
ಧಾರ್ಮಿಕ ವಿಶ್ವಾಸ ಜಾತಿ ವಿಶ್ವಾಸ ರಾಷ್ಟ್ರೀಯತೆಯೊಂದಿಗೆ ಸಂಕೀರ್ಣ ಸಂಬಂಧ ಹೊಂದಿದೆ. ಅವುಗಳು ರಾಷ್ಟ್ರೀಯಕ್ಕೆ ಪೂರಕವಾಗಿಯೂ ವಿರೋಧವಾಗಿಯೂ ನಿಂತಿರುವುದನ್ನು ಕಾಣಬಹುದಾಗಿದೆ. ಹಿಂದೂ ಎಂಬ ಪದಕ್ಕೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಸಿಂಧು ನದಿ ತಟದಲ್ಲಿರುವವವರನ್ನು ಸಿಂಧು ಎಂದು ಕರೆಯಲಾಗುತ್ತಿತ್ತು. ಇಲ್ಲಿ ಯಾವುದೇ ಧರ್ಮಕ್ಕೂ ಸೇರದ ಮಂದಿಯನ್ನು ಜನರು ಹಿಂದು ಎಂದು ಕರೆದರು. ಧರ್ಮ ಎನ್ನುವುದು ವಿಶ್ವಾಸ ಸಂಹಿತೆಯಾಗಿದೆ.ರಾಷ್ಟ್ರೀಯತೆ ಭೌತಿಕವಾಗಿದೆ. ರಾಷ್ಟ್ರೀಯ ಕೇವಲ ಸಂಕಲ್ಪ ಆಗಿರುವುದರಿಂದ ಹಿಂದೂ ರಾಷ್ಟ್ರೀಯತೆ ,ಇಸ್ಲಾಮ್ ರಾಷ್ಟ್ರೀಯತೆ, ಕ್ರೈಸ್ತ ರಾಷ್ಟ್ರೀಯತೆ ಎಲ್ಲವೂ ಅತಿರೇಕ ಕಲ್ಪನೆಗಳು ಎಂದು ಅವರು ಹೇಳಿದರು. ಖದೀಜಾ ಮುಮ್ತಾಝ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರೆಂದು ವರದಿ ತಿಳಿಸಿದೆ.