×
Ad

ಗಾಂಧಿ ಚಿತ್ರರಹಿತ 2,000 ರೂ.ನೋಟಿನ ಬಳಿಕ ಈಗ ಒಂದು ಬದಿ ಖಾಲಿಯಿರುವ 500 ರೂ.ನೋಟು !

Update: 2017-01-12 17:34 IST

ಭೋಪಾಲ,ಜ.12: ಮಧ್ಯಪ್ರದೇಶದ ಬ್ಯಾಂಕೊಂದರಿಂದ ಪಡೆಯಲಾಗಿದ್ದ 2,000 ರೂ.ಗಳ ನೋಟುಗಳಲ್ಲಿ ಗಾಂಧಿ ಚಿತ್ರವಿಲ್ಲದಿದ್ದ ನೋಟೊಂದು ಪತ್ತೆಯಾದ ಬಳಿಕ ಈಗ ಅದೇ ಮಧ್ಯಪ್ರದೇಶದ ಖರ್ಗೋನೆ ಜಿಲ್ಲೆಯ ಎಟಿಎಂ ನೀಡಿರುವ 500 ರೂ. ಹೊಸನೋಟುಗಳ ಪೈಕಿ ಎರಡು ನೋಟುಗಳ ಒಂದು ಬದಿ ಪೂರ್ಣ ಖಾಲಿಯಾಗಿದ್ದು, ಬಿಳಿ ಕಾಗದದಂತಿದೆ.

ಜಿಲ್ಲೆಯ ಸೆಗಾಂವ್ ಗ್ರಾಮದಲ್ಲಿರುವ ರಾಷ್ಟ್ರೀಕೃತ ಬ್ಯಾಂಕೊಂದರ ಎಟಿಎಂನಿಂದ ಹೇಮಂತ ಸೋನಿ ಎನ್ನುವವರು 1,500 ರೂ.ಹಿಂಪಡೆದಿದ್ದರು. ಎಟಿಎಂ ನೀಡಿರುವ ಮೂರು 500 ರೂ.ಗಳ ನೋಟುಗಳ ಪೈಕಿ ಎರಡು ನೋಟುಗಳಲ್ಲಿ ಈ ದೋಷ ಕಂಡುಬಂದಿದೆ.

ಸೋನಿ ಸಂಬಂಧಿತ ಬ್ಯಾಂಕ್ ಅಧಿಕಾರಿಗಳಿಗೆ ಈ ಬಗ್ಗೆ ದೂರು ಸಲ್ಲಿಸಿದ ಬಳಿಕ ಅವರಿಗೆ ಹೊಸ ನೋಟುಗಳನ್ನು ಬದಲಿಸಿ ನೀಡಲಾಗಿದೆ.

ಈ ದೋಷಪೂರ್ಣ ನೋಟುಗಳು ಆರ್‌ಬಿಐನಿಂದ ಬಂದಿದ್ದು, ನಾವೀಗ ನೊಟುಗಳನ್ನು ಎಟಿಎಂಗೆ ತುಂಬುವ ಮುನ್ನ ಪರಿಶೀಲಿಸುತ್ತಿದ್ದೇವೆ. ಇದೊಂದು ಮುದ್ರಣದೋಷ ಎಂದು ಬ್ಯಾಂಕಿನ ಅಧಿಕಾರಿಗಳು ತಿಳಿಸಿದ್ದಾರೆ. ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News