ಸುಷ್ಮಾಗೆ ಬಿಟ್ಟಿ ಸಲಹೆ ಕೊಟ್ಟ ಶೋಭಾ ಡೇ ವಿರುದ್ಧ ಟ್ವಿಟ್ಟರ್ ನಲ್ಲಿ ಸರ್ಜಿಕಲ್ ದಾಳಿ !

Update: 2017-01-14 16:02 GMT

ವಿವಾದಗಳಿಗೂ ಶೋಭಾ ಡೇ ಗೂ ಅತ್ಯಂತ ಹತ್ತಿರದ ಸಂಬಂಧ. ಚರ್ಚೆಯಲ್ಲಿರುವ ವಿಷಯ ಅಥವಾ ಚಾಲ್ತಿಯಲ್ಲಿರುವ ಜನರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವುದು ಅವರ ಹಳೆಯ ಚಾಳಿ. ಒಟ್ಟಾರೆ ಅದು ವಿವಾದಕ್ಕೆ ಗುರಿಯಾಗಬೇಕು. ಕೆಲವು ದಿನ ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಚರ್ಚೆಯಾಗಬೇಕು. ಆ ಮೂಲಕ ಜನರು ಡೇ ಯನ್ನು ಮತ್ತೆ ನೆನಪಿಸಿಕೊಳ್ಳಬೇಕು. ಅಷ್ಟೇ. ಆ ಹೇಳಿಕೆಗೆ ಯಾವ ತರ್ಕವಿದೆ ಎಂಬುದು ನಂತರ ವಿಷಯ .

ಅಂದ ಹಾಗೆ, ಈ ಬಾರಿ ಶೋಭಾ ಡೇ ಆಯ್ಕೆ ಮಾಡಿಕೊಂಡಿದ್ದು ಸದ್ಯಕ್ಕೆ ಅತ್ಯಂತ ಹೆಚ್ಚು ಚರ್ಚೆಯಲ್ಲಿರುವ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದರೂ ಟ್ವಿಟ್ಟರ್ ಮೂಲಕವೇ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ವ್ಯಾಪಕ ಜನಪ್ರಿಯತೆ ಗಳಿಸಿರುವ ಸುಷ್ಮಾ ಅವರನ್ನೇ ಡೇ ಟಾರ್ಗೆಟ್ ಮಾಡಿದ್ದಾರೆ. ಅದೂ ನೀವು ಇನ್ನು ಮೇಲೆ ಟ್ವೀಟ್ ಮಾಡಬೇಡಿ ಎಂದು ಹೇಳುವ ಮೂಲಕ ! ಹೊಸ ವರ್ಷಕ್ಕೆ ಶಾಂತಿಯಿಂದ ಇರುವುದಾಗಿ ಹಾಗು ಟ್ವೀಟ್ ಮಾಡುವುದನ್ನು ನಿಲ್ಲುಸುವುದಾಗಿ ಸುಷ್ಮಾ ಪ್ರತಿಜ್ಞೆ ಮಾಡಿ ಎಂದು ಪುಕ್ಕಟೆ ಸಲಹೆ ಕೊಟ್ಟುಬಿಟ್ಟರು ಶೋಭಾ ಡೇ. ಹೇಳಿ ಕೇಳಿ ಟ್ವೀಟ್ ಮೂಲಕವೇ ಇಷ್ಟೊಂದು ಜನಮನ್ನಣೆ ಗಳಿಸಿದ್ದು. ಹಾಗಾಗಿ ಡೇ ಟ್ವೀಟ್ ವಿರುದ್ಧ ಟ್ವಿಟ್ಟರ್ ನಲ್ಲಿ ಅಸಮಾಧಾನ, ಆಕ್ರೋಶ ಹರಿದು ಬಂತು. ಅದರ ಕೆಲವು ಸ್ಯಾಂಪಲ್ ಗಳು ಇಲ್ಲಿವೆ : 

#1

#2 

#3

#4  

 

#5 

#6 

#7 

#8 

#9 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News