×
Ad

ದೇಶದ 400 ಸ್ಟೇಷನ್‌ಗಳಲ್ಲಿ ಫೋನ್ ಸಹ ಇಲ್ಲ!

Update: 2017-01-15 09:21 IST

ಅಚ್ಚರಿಯ ಅಂಕಿ ಅಂಶಗಳು

ಹೊಸದಿಲ್ಲಿ,ಜ.15: ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಇದಕ್ಕೆ ಹಲವು ಬಾರಿ ಪೊಲೀಸರ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಆದರೆ ಪೊಲೀಸರನ್ನು ದೂರುವ ಮುನ್ನ ಒಂದು ಅಂಶವನ್ನು ಮನದಟ್ಟು ಮಾಡಿಕೊಳ್ಳಬೇಕು. ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಕನಿಷ್ಠ ಬೇಕಾದ ಮೂಲಸೌಕರ್ಯಗಳೂ ಹಲವು ಠಾಣೆಗಳಲ್ಲಿ ಇಲ್ಲದಿರುವುದು ಇದೀಗ ಬೆಳಕಿಗೆ ಬಂದಿದೆ. ಹಲವು ಠಾಣೆಗಳಿಗೆ ವಾಹನಗಳ ಕೊರತೆ ಇದ್ದರೆ, ಫೋನ್, ವೈರ್‌ಲೆಸ್‌ನಂಥ ಸೌಲಭ್ಯಗಳೂ ಮತ್ತೆ ಕೆಲವೆಡೆಗೆ ಇಲ್ಲ. 188 ಠಾಣೆಗಳಿಗೆ ವಾಹನ ಇಲ್ಲ; 402 ಠಾಣೆಗಳಿಗೆ ದೂರವಾಣಿ ಇಲ್ಲ;, 134ಕ್ಕೆ ವೈರ್‌ಲೆಸ್ ಸೆಟ್ ಕೂಡಾ ಇಲ್ಲ. 65 ಠಾಣೆಗಳಿಗೆ ವೈರ್‌ಲೆಸ್ ಅಥವಾ ಫೋನ್ ಹೀಗೆ ಯಾವುದೂ ಇಲ್ಲ ಎನ್ನುವುದು ಪೊಲೀಸ್ ರೀಸರ್ಚ್ ಹಾಗೂ ಡೆವಲಪ್‌ಮೆಂಟ್ ಬ್ಯೂರೊ ಕಲೆಹಾಕಿದ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಮಣಿಪುರದ 43 ಠಾಣೆಗಳಲ್ಲಿ ಫೋನ್ ಅಥವಾ ವೈರ್‌ಲೆಸ್ ಸೆಟ್‌ಗಳು ಕೂಡಾ ಇಲ್ಲ. ಛತ್ತೀಸ್‌ಗಡದ 161 ಠಾಣೆಗಳಿಗೆ ವಾಹನ ಇಲ್ಲ. ಮಧ್ಯಪ್ರದೇಶದಲ್ಲಿ 111 ದೂರವಾಣಿ ರಹಿತ ಠಾಣೆಗಳಿದ್ದರೆ, ಮೇಘಾಲಯ ಹಾಗೂ ಮಣಿಪುರದಲ್ಲಿ ಇಂಥ ಠಾಣೆಗಳ ಸಂಖ್ಯೆ 67. ಉತ್ತರ ಪ್ರದೇಶದಲ್ಲಿ 51 ಠಾಣೆಗಳಿಗೆ ದೂರವಾಣಿ ಇಲ್ಲ. 17 ಠಾಣೆಗಳಿಗೆ ದೂರವಾಣಿ ಮತ್ತು ವೈರ್‌ಲೆಸ್ ಸೌಲಭ್ಯ ಇಲ್ಲ.

ದೇಶದಲ್ಲಿ ಒಟ್ಟು 10014 ಗ್ರಾಮೀಣ ಹಾಗೂ 5025 ನಗರ ಠಾಣೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News