×
Ad

ಗಾಂಧೀಜಿಯ ಗೌರವ 10ಲಕ್ಷರೂ.ಕೋಟು ಧರಿಸುವ ಮೋದಿಗೆ ಸಿಗಲ್ಲ: ರಮೇಶ್ ಚೆನ್ನಿತ್ತಲ

Update: 2017-01-15 12:28 IST

ತಿರುವನಂತಪುರಂ,ಜ.15: ಸ್ವಂತ ಬಟ್ಟೆಗಾಗಿ ಸ್ವತಃ ನೂಲು ತೆಗೆದ ಗಾಂಧೀಜಿಯ ಮಹತ್ವ ಹತ್ತು ಲಕ್ಷ ರೂಪಾಯಿಯ ಕೋಟು ಧರಿಸುವ ಮೋದಿಗೆ ಸಿಗಲ್ಲ ಎಂದು ಕೇರಳ ವಿಧಾನ ಸಭೆಯ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಗುಜರಾತ್‌ನಲ್ಲಿ ಹುಟ್ಟಿದ್ದಕ್ಕಾಗಿ ಗಾಂಧೀಜಿಯಾಗಲು ಸಾಧ್ಯವಿಲ್ಲ . ಅಧಿಕಾರದ ಮದದಲ್ಲಿ ಏನು ಬೇಕಾದರೂ ಮಾಡಬಹುದು ಎಂದು ಭಾವಿಸುವುದಾದರೆ ಅದನ್ನು ಭಾರತೀಯರು ಕ್ಷಮಿಸಲಾರರು ಎಂದು ರಮೇಶ್ ಚೆನ್ನಿತ್ತಲ ಫೇಸ್‌ಬುಕ್‌ನಲ್ಲಿ ಹೇಳಿದ್ದಾರೆ.

ಚೆನ್ನಿತ್ತಲರ ಫೇಸ್‌ಬುಕ್ ಪೋಸ್ಟ್‌ನಪೂರ್ಣರೂಪ:

 ಗಾಂಧೀಜಿಯನ್ನು ಖಾದಿ ಕಮಿಷನ್ ಕ್ಯಾಲೆಂಡರ್‌ನಿಂದ ತೆಗೆದು ಹಾಕಲು ಮಾತ್ರ ಮೋದಿಯಿಂದ ಸಾಧ್ಯವಿದೆ. ಭಾರತದ ಜನರ ಮನಸ್ಸಿನಿಂದ ಮರೆಸಲು ಸಾಧ್ಯವಿಲ್ಲ. ಅರೆನಗ್ನ ಫಕೀರ ಗಾಂಧಿ ಸ್ವಂತ ಬಟ್ಟೆಗಾಗಿ ಸ್ವಯಂ ಚರಕದಿಂದ ನೂಲು ನೂತರು. ಮೋದಿ ಹತ್ತು ಲಕ್ಷರೂಪಾಯಿ ಬೆಲೆಯ ಕೋಟು ಧರಿಸುತ್ತಿರುವುದರಿಂದ ಆ ಮಹತ್ವವೇನು ಮೋದಿಗೆ ಸಿಗುವುದಿಲ್ಲ. ಗುಜರಾತ್‌ನಲ್ಲಿ ಜನಿಸಿದ್ದರಿಂದ ಗಾಂಧಿಯಾಗಲು ಸಾಧ್ಯವಿಲ್ಲ. ಅಧಿಕಾರದ ಮದದಲ್ಲಿ ಎನು ಬೇಕಾದರೂ ಮಾಡಬಹುದು ಎಂದು ಭಾವಿಸಿದ್ದರೆ ಅದಕ್ಕೆ ಭಾರತದ ಜನರು ಕ್ಷಮೆ ನೀಡುವುದಿಲ್ಲ ಎಂದು ರಮೇಶ್ ಚೆನ್ನಿತ್ತಲ್ಲ ಫೇಸ್ ಬುಕ್‌ನಲ್ಲಿ ಬರೆದಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News