ಈ 'ಸ್ಮಾರ್ಟ್ ಫೋನ್' ಪೊಲೀಸರ ನಿದ್ದೆಗೆಡಿಸಿದೆ. ಏಕೆಂದರೆ, ಇದು ಸ್ಮಾರ್ಟ್ ಫೋನ್ ಅಲ್ಲ...

Update: 2017-01-15 17:11 GMT

ಲಂಡನ್, ಜ.15: ಈ ’ಸ್ಮಾರ್ಟ್ ಫೋನ್’ ಯೂರೋಪ್ ಪೊಲೀಸರ ನಿದ್ದೆಗೆಡಿಸಿದೆ. ಏಕೆ ಗೊತ್ತೇ? ಇದು ಸ್ಮಾರ್ಟ್ ಫೋನ್ ಅಲ್ಲ. ಹ್ಯಾಂಡ್ ಗನ್‌ನ ಹೊಸ ಅವತಾರ!. ಅಮೆರಿಕದಲ್ಲಿ ಈಗ ಮಾರಾಟವಾಗುತ್ತಿರುವ ಎ.380 ಕ್ಯಾಲಿಬ್ರೆ ಹ್ಯಾಂಡ್‌ಗನ್ ಯೂರೋಪ್‌ಗೆ ಕಳ್ಳಮಾರ್ಗದ ಮೂಲಕ ಬರಬಹುದು ಎನ್ನುವುದು ಪೊಲೀಸರ ಆತಂಕಕ್ಕೆ ಕಾರಣವಾಗಿದೆ.

ಮಿನ್ನೆಸೋಸ್ಟ ಇದನ್ನು ಉತ್ಪಾದಿಸಿದ್ದು, ಈ ಎರಡು ಡಬ್ಬಲ್ ಬ್ಯಾರಲ್ ಪಿಸ್ತೂಲ್ ಎರಡು ಬುಲೆಟ್‌ಗಳನ್ನು ಇಟ್ಟುಕೊಳ್ಳಬಲ್ಲದು. ಪಿಸ್ತೂಲಿನ ಹಿಡಿಕೆಯನ್ನು ಮಡಚಬಹುದಾಗಿದ್ದು, ಸ್ಮಾರ್ಟ್ ಫೋನ್‌ನಂತೆ ಪರಿವರ್ತಿಸಬಹುದು. ಐಫೋನ್‌ನಂತೆ ಕಾಣುತ್ತದೆ.

ಐಡಿಯಲ್ ಕನ್ಸೀಲ್ ಹ್ಯಾಂಡ್‌ಗನ್‌ಗೆ ಈಗಾಗಲೇ 12 ಸಾವಿರ ಮಂದಿ ಉತ್ಪಾದನಾಪೂರ್ವ ಬೇಡಿಕೆ ಸಲ್ಲಿಸಿದ್ದಾರೆ. ಇದರ ಬೆಲೆ 395 ಡಾಲರ್ ಎಂದು ಟೈಮ್ಸ್ ವರದಿ ಮಾಡಿದೆ. 2017ರ ಮೊದಲ ತ್ರೈಮಾಸಿಕದಲ್ಲಿ ಪಿಸ್ತೂಲ್ ಪೂರೈಕೆಯಾಗಲಿದೆ. ಬೆಲ್ಜಿಯಂ ಪೊಲೀಸರು ಇದೀಗ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಸಂಪೂರ್ಣ ಕಟ್ಟೆಚ್ಚರ ವಹಿಸಿದ್ದಾರೆ. ಸದ್ಯದಲ್ಲೇ ಕಳ್ಳಮಾರ್ಗದ ಮೂಲಕ ಯೂರೋಪ್‌ಗೆ ಆಗಮಿಸಬಹುದು ಎನ್ನುವುದು ಪೊಲೀಸರ ಅನಿಸಿಕೆ.

ಮೇಲ್ನೋಟಕ್ಕೆ ಇದಕ್ಕೂ, ಸ್ಮಾರ್ಟ್ ಫೋನ್‌ಗೂ ವ್ಯತ್ಯಾಸವೇ ಕಾಣುವುದಿಲ್ಲ ಎಂದು ಸ್ಥಳೀಯ ಪತ್ರಿಕೆಗಳು ಬಣ್ಣಿಸಿವೆ. ಇದರ ಉತ್ಪಾದಕ ಸಂಸ್ಥೆಯ ಹೇಳಿಕೆಯಂತೆ ಕನ್ಸೀಲ್ ಪಿಸ್ತೂಲ್ ಅನ್ನು ಸುಲಭವಾಗಿ ಹುದುಗಿಸಿಕೊಳ್ಳಲು ಸಾಧ್ಯವಾಗಲಿದೆ. ಇದನ್ನು ಪರ್ಸ್, ಬ್ಯಾಕ್ ಪಾಕೆಟ್ ಎಲ್ಲಿಬೇಕಾದರೂ ಇಟ್ಟುಕೊಳ್ಳಬಹುದು ಎಂದು ವೆಬ್‌ಸೈಟ್ ವಿವರಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News