×
Ad

ಪಿಕಪ್ ವ್ಯಾನಿಗೆ ಲಾರಿ ಡಿಕ್ಕಿ: ಎಂಟು ಜನರ ಸಾವು

Update: 2017-01-15 23:00 IST

ನಾಡಿಯಾ(ಪ.ಬಂ)ಜ.15: ಇಲ್ಲಿಯ ನಕಾಸಿಪಾರಾ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 34ರಲ್ಲಿ ಜುಗಪುರ್ ಬಳಿ ಇಂದು ಸಂಜೆ ಲಾರಿಯೊಂದು ಪಿಕಪ್ ವ್ಯಾನಿಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ವ್ಯಾನಿನಲ್ಲಿದ್ದ ಎಂಟು ಜನರು ಸಾವನ್ನಪ್ಪಿದ್ದು, ಏಳು ಜನರು ಗಾಯಗೊಂಡಿದ್ದಾರೆ.

ವ್ಯಾನಿನಲ್ಲಿದ್ದವರು ಜಿಲ್ಲೆಯ ಬೇಥುದಹರಿ ಅರಣ್ಯಕ್ಕೆ ಪ್ರವಾಸಕ್ಕೆ ಹೋಗಿ ದಿಗ್ನಾಪುರಕ್ಕೆ ವಾಪಸಾಗುತ್ತಿದ್ದರು. ಪ್ರವಾಸದ ಸ್ಥಳದಿಂದ ಒಂದು ಕಿ.ಮೀ.ದೂರ ಸಾಗುವಷ್ಟರಲ್ಲೇ ಈ ಅಪಘಾತ ಸಂಭವಿಸಿದೆ.

ವೇಗದಿಂದ ಚಲಿಸುತ್ತಿದ್ದ ವ್ಯಾನಿನ ಚಾಲಕ ಲಾರಿಯೊಂದನ್ನು ಓವರ್‌ಟೇಕ್ ಮಾಡುವ ಭರಾಟೆಯಲ್ಲಿ ಎದುರಿನಿಂದ ಬರುತ್ತಿದ್ದ ಇನ್ನೊಂದು ಲಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News