1% ಮಂದಿಯಲ್ಲಿ ಭಾರತದ 58% ಸಂಪತ್ತು !

Update: 2017-01-16 06:07 GMT

ಹೊಸದಿಲ್ಲಿ, ಜ.16: ಭಾರತದ 57 ಕೋಟ್ಯಾಧಿಪತಿಗಳ ಬಳಿ ದೇಶದ ಶೇ.70ರಷ್ಟು ಬಡವರ ಬಳಿಯಿರುವ ಒಟ್ಟು ಸಂಪತ್ತಿನಷ್ಟೇ ಸಂಪತ್ತು ಇದೆಯೆಂದು ಜಾಗತಿಕ ಅಸಮಾನತೆಯ ಕುರಿತು ಓಕ್ಸ್ ಫ್ಯಾಮ್ ಎಂಬ 18 ಸರಕಾರೇತರ ಸಂಘಟನೆಗಳ ಅಂತಾರಾಷ್ಟ್ರೀಯ ಒಕ್ಕೂಟ ಬಿಡುಗಡೆಗೊಳಿಸಿದ ವರದಿ ತಿಳಿಸಿದೆ.

ಇನ್ನೊಂದು ಸಾಮ್ಯತೆ ನೀಡಿದ ಸಂಘಟನೆ ವಿಶ್ವದ ಒಟ್ಟು 8 ಮಂದಿ ಅದೆಷ್ಟು ಶ್ರೀಮಂತರಾಗಿದ್ದಾರೆಂದರೆ ಅವರು ಜಗತ್ತಿನ ಶೇ.50ರಷ್ಟು ಬಡವರು ಹೊಂದಿರುವಷ್ಟು ಸಂಪತ್ತು ಹೊಂದಿದ್ದಾರೆಂದು ಹೇಳಿದೆ. ಮುಂದಿನ 20 ವರ್ಷಗಳಲ್ಲಿ ಕೇವಲ 500 ಮಂದಿ ಭಾರತದ ಪ್ರಸಕ್ತ ಜಿಡಿಪಿಗಿಂತಲೂ ಹೆಚ್ಚಾಗಿರುವ 2.1 ಟ್ರಿಲಿಯನ್ ಡಾಲರ್‌ಮೌಲ್ಯದ ಸಂಪತ್ತನ್ನು ತಮ್ಮ ವಾರಸುದಾರರಿಗೆನೀಡಲಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ.

ವಿಶ್ವದಾದ್ಯಂತ ಆರ್ಥಿಕ ಅಸಮಾನತೆ ಹೆಚ್ಚುತ್ತಿರುವುದನ್ನು ಆಕ್ಸ್ ಫ್ಯಾಮ್ ತನ್ನ ವರದಿಯಲ್ಲಿ ಹೇಳಿದೆಯಲ್ಲದೆ, ಉದಾಹರಣೆಯೊಂದನ್ನು ನೀಡಿ ಭಾರತದಲ್ಲಿ ಖ್ಯಾತ ಐಟಿ ಕಂಪೆನಿಯ ಸಿಇಒ ಒಬ್ಬಆ ಕಂಪೆನಿಯ ಸಾಮಾನ್ಯ ಉದ್ಯೋಗಿಗಿಂತ 416 ಪಟ್ಟು ಅಧಿಕ ಆದಾಯ ಗಳಿಸುತ್ತಾನೆ ಎಂದು ಹೇಳಿದೆ.
ಭಾರತದಲ್ಲಿರುವ ಅತ್ಯಂತ ಶ್ರೀಮಂತ ಶೇ.10ರಷ್ಟು ಜನರಲ್ಲಿ ದೇಶದ ಶೇ.80ರಷ್ಟು ಸಂಪತ್ತಿದ್ದರೆ,ಅತ್ಯಂತ ಶ್ರೀಮಂತರಾಗಿರುವ ಶೇ.1ರಷ್ಟು ಜನಸಂಖ್ಯೆಯ ಬಳಿ ಶೇ.58ರಷ್ಟು ಸಂಪತ್ತು ಇದೆ ಎಂದು ವರದಿ ತಿಳಿಸಿದೆ.

1998 ಹಾಗೂ 2011ರ ನಡುವೆಅತ್ಯಂತ ಬಡವರಾಗಿರುವ ಶೇ.10ರಷ್ಟು ಭಾರತೀಯರ ಆದಾಯವು ವಾರ್ಷಿಕ ಶೇ.1ರಂತೆ ರೂ 2000ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಶೇ.10ರಷ್ಟಿರುವ ಶ್ರೀಮಂತರ ಆದಾಯವು ಶೇ.25ರಷ್ಟು ಅಂದರೆ ಅಂದಾಜು ರೂ 40,000ರಷ್ಟು ಹೆಚ್ಚಾಗಿದೆ.

ಜನವರಿ 10ರಂದು ಎಚ್ ಎಸ್ ಬಿಸಿ ಭಾರತದಲ್ಲಿನ ಸಾಮಾಜಿಕ ರಂಗದ ವೆಚ್ಚಗಳ ಬಗ್ಗೆ ವರದಿ ಬಿಡುಗಡೆಗೊಳಿಸಿದ ಬೆನ್ನಲ್ಲೇ ಆಕ್ಸ್ ಫ್ಯಾಮ್ ವರದಿ ಬಂದಿದೆ. ಭಾರತದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗಾಗಿ ವ್ಯಯಿಸಲಾಗುತ್ತಿರವ ಮೊತ್ತವು ಜಾಗತಿಕ ಮಟ್ಟಕ್ಕೆ ಹೋಲಿಸಿದಾಗ ಬಹಳ ಕಡಿಮೆಯೆಂದು ವರದಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News