×
Ad

ಮುಂಬೈಯ ಹೊಟೇಲಲ್ಲಿ ಕೇರಳದ ಜ್ಯುವೆಲ್ಲರಿ ಮಾಲಕನ ಕಗ್ಗೊಲೆ

Update: 2017-01-17 16:08 IST

ಮುಂಬೈ, ಜ.17: ನಗರದ ಲಾಡ್ಜ್ ಒಂದರಲ್ಲಿ ಕೇರಳದ ಜ್ಯುವೆಲ್ಲರಿ ಮಾಲಕ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚೆಂಬೂರಿನ ಕಮಲ್ ಲಾಡ್ಜ್‌ನಲ್ಲಿ ಘಟನೆ ನಡೆದಿದೆ. ತೃಶೂರಿನ ಜ್ಯುವೆಲ್ಲರಿ ಮಾಲಕ ಎಂ ರಾಜು ಕೊಲೆಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 11 ತಾರೀಕಿಗೆ ಇವರು ಕೋಣೆ ಪಡೆದಿದ್ದರು. ಮೂರುದಿವಸಗಳಲ್ಲಿ ಕೋಣೆ ತೆರೆದಿರಲಿಲ್ಲ. ನಂತರ ಮೊಬೈಲ್ ಕರೆ ಮಾಡಿದಾಗ ಪ್ರತಿಕ್ರಿಯಿಸಿರಲಿಲ್ಲ. ಶಂಕೆಗೊಂಡು ಹೊಟೇಲ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು.

ಕೋಣೆ ತೆರೆದಾಗ ಫ್ಯಾನ್‌ಗೆ ನೇಣು ಹಾಕಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಆದರೆ ಕೋಣೆಯನ್ನು ಹೊರಗಿನಿಂದ ಮುಚ್ಚಿ ಬೀಗ ಹಾಕಲಾಗಿತ್ತು. ಆದ್ದರಿಂದ ಇದೊಂದು ಕೊಲೆಕೃತ್ಯವೆಂದು ಶಂಕಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತಪಟ್ಟಿರುವ ಜ್ಯುವೆಲ್ಲರಿ ಮಾಲಕ ದಿಲ್ಲಿ,ಕೊಲ್ಕತಾ ಸಂದರ್ಶನದ ಬಳಿಕ ಮುಂಬೈಯ ಈ ಲಾಡ್ಜ್‌ನಲ್ಲಿ ತಂಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News