×
Ad

ಮಾದರಿ ನೀತಿ ಸಂಹಿತೆ ಉಲ್ಲಂಘನೆ : ಮುಝಫರ್ ನಗರ ಬಿಜೆಪಿ ಶಾಸಕನ ವಿರುದ್ಧ ಪ್ರಕರಣ

Update: 2017-01-18 18:45 IST

ಮುಝಫರ್ ನಗರ,ಜ.18: ವಿಧಾನಸಭಾ ಚುನಾವಣೆ ಸನ್ನಿಯಲ್ಲಿರುವ ಉತ್ತರ ಪ್ರದೇಶದ ಮುಝಫರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಕಪಿಲದೇವ್ ಅಗರವಾಲ್ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಮುಝಫರ್ ನಗರ ಕ್ಷೇತ್ರದ ಅಭ್ಯರ್ಥಿಯಾಗಿ ದೇವ್ ಅವರ ಮರುನಾಮಕರಣವನ್ನು ಬಿಜೆಪಿಯು ಮಂಗಳವಾರ ಪ್ರಕಟಿಸಿದ ಬಳಿಕ ಅವರ ಬೆಂಬಲಿಗರು ಪೂರ್ವಾನುಮತಿಯನ್ನು ಪಡೆದುಕೊಳ್ಳದೆ ಇಲ್ಲಿಯ ಶಿವಚೌಕ್‌ನಲ್ಲಿ ನೆರೆದಿದ್ದರು. ಇದರಿಂದಾಗಿ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು . ಈ ಹಿನ್ನೆಲೆಯಲ್ಲಿ ದೇವ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸಿಪಿಐ ತೇಜಬೀರ್ ಸಿಂಗ್ ತಿಳಿಸಿದರು.

 ತನ್ಮಧ್ಯೆ ಸ್ಥಳೀಯ ಎಸ್‌ಪಿ ನಾಯಕ ಗೌರವ್ ಜೈನ್ ವಿರುದ್ಧವೂ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News