ಪಾಕ್: ಎಲ್‌ಇಜೆ ವರಿಷ್ಠ ಆಸೀಫ್ ಚೋಟು ಹತ್ಯೆ

Update: 2017-01-18 18:10 GMT

ಲಾಹೋರ್,ಜ.18: ಪಾಕಿಸ್ತಾನದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿರುವ ನಿಷೇಧಿತ ಲಷ್ಕರೆ ಜಾಂಗ್ವಿ ಗುಂಪಿನ ಉಗ್ರ ಅಸೀಫ್ ಚೋಟು ಹಾಗೂ ಆತನ ಮೂವರು ಸಹಚರರನ್ನು ಲಾಹೋರ್‌ನಿಂದ 40 ಕಿ.ಮೀ. ದೂರದ ಶೇಖ್‌ಪುರ ಎಂಬಲ್ಲಿ ಹತ್ಯೆಗೈಯಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಹಲವಾರು ಭಯೋತ್ಪಾದಕ ಪ್ರಕರಣಗಳಲ್ಲಿ ಬೇಕಾಗಿದ್ದ ಅಸೀಫ್ ಚೋಟು ತಲೆಗೆ ಪಾಕ್ ಪೊಲೀಸರು 30 ಲಕ್ಷ ರೂ. ಘೋಷಿಸಿದ್ದರು. ಲಾಹೋರ್‌ನಲ್ಲಿರುವ ಅತ್ಯಂತ ಸೂಕ್ಷ್ಮಸಂವೇದಿ ಇಲಾಖೆಯೊಂದರ ಕಚೇರಿಯ ಮೇಲೆ ದಾಳಿ ನಡೆಸಲು ಅಸೀಫ್ ಚೋಟು ಹಾಗೂ ಆತನ ಸಹಚರರು ಸಂಚು ಹೂಡಿದ್ದರು. ಮಂಗಳವಾರ ರಾತ್ರಿ ನಾಲ್ಕು ಮೋಟಾರ್ ಸೈಕಲ್‌ಗಳಲ್ಲಿ ಫಾರೂಖಾಬಾದ್‌ನಿಂದ ಲಾಹೋರ್‌ಗೆ ಆಗಮಿಸುತ್ತಿದ್ದ ಅವರನ್ನು ಶೇಖ್‌ಪುರ ಎಂಬಲ್ಲಿ ಭಯೋತ್ಪಾದನೆ ತಡೆ ದಳ(ಸಿಟಿಡಿ) ಅಡ್ಡಗಟ್ಟಿತ್ತು. ಆಗ ನಡೆದ ಗುಂಡಿನ ಚಕಮಕಿಯಲ್ಲಿ ಆಸೀಫ್ ಸಹಿತ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಮೂವರು ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News