ಐ ಕ್ವಿಟ್, ಡ್ಯಾಡಿ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ 10ನೆ ತರಗತಿ ವಿದ್ಯಾರ್ಥಿ
Update: 2017-01-19 16:37 IST
ಲಕ್ನೊ,ಜ.19: ಉತ್ತರ ಪ್ರದೇಶದ ಲಕ್ನೊದಲ್ಲಿ 10ನೆ ಇಯತ್ತೆಯ ವಿದ್ಯಾರ್ಥಿಯೊಬ್ಬ ಸ್ವಯಂ ಗುಂಡುಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಐ ಕ್ವಿಟ್ ಡ್ಯಾಡಿ ಎಂದು ನೋಟ್ ಬರೆದಿಟ್ಟಿದ್ದ ಎಂದು ವರದಿಯಾಗಿದೆ.
ತನ್ನ ಅತ್ಮಹತ್ಯೆಗೆ ತಂದೆಯ ಪರವಾನಿಗೆ ಇರುವ ಬಂದೂಕನ್ನು ಆತ ಬಳಸಿಕೊಂಡಿದ್ದಾನೆ. ಹುಡುಗನು ಬರೆದಿಟ್ಟ ಪತ್ರವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಹದಿನೇಳು ವರ್ಷದ ಹುಡುಗ ಇಂತಹ ನಿಷ್ಠುರ ಕೆಲಸಕ್ಕೆ ಯಾಕೆ ಕೈಹಾಕಿದ ಎನ್ನುವುದು ಪತ್ತೆಯಾಗಿಲ್ಲ. ಉತ್ತರಪ್ರದೇಶದ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಲೈಸೆನ್ಸುದಾರರು ತಮ್ಮ ಲ್ಲಿರುವ ಬಂದೂಕು ಪೊಲೀಸರ ವಶ ಒಪ್ಪಿಸಬೇಕೆಂದು ಸೂಚಿಸಲಾಗಿತ್ತು. ಆದರೂ ಈ ಮನೆಯವರು ಲೈಸನ್ಸನ್ನು ಯಾಕೆ ಠಾಣೆಗೆ ಕೊಂಡು ಹೋಗಿಕೊಟ್ಟಿಲ್ಲ ಎಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿತಿಳಿಸಿದೆ.