ಹರಿದ ಕುರ್ತಾ ತೋರಿಸಿದ ರಾಹುಲ್ ಗೆ 100 ರೂಪಾಯಿ ಕಳಿಸಿದ !
ಹೊಸದಿಲ್ಲಿ, ಜ. 19: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಹರಿದ ಕುರ್ತಾ ರಿಪೇರಿಗೆ ಗಾಝಿಯಾಬಾದ್‌ನ ಮುಖೇಶ್ ಕುಮಾರ್ ಮಿತ್ತಲ್ ನೂರು ರೂಪಾಯಿ ಡ್ರಾಪ್ಟ್ ಕಳಿಸಿಕೊಟ್ಟಿದ್ದಾರೆ. ಚಾರ್ಟೆಡ್ ಎಕೌಂಟ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮುಖೇಶ್, ಕುರ್ತಾ ಹರಿದದ್ದನ್ನು ಹೊಲಿಸಿಕೊಳ್ಳಲಿ ಎಂದು ಡಿಮಾಂಡ್ ಡ್ರಾಫ್ಟ್ ಸ್ಪೀಡ್ ಪೋಸ್ಟ್‌ನಲ್ಲಿ ಕಳುಹಿಸಿದ್ದಾರೆ.
ಡ್ರಾಫ್ಟ್ ಜೊತೆ ಪತ್ರದಲ್ಲಿ ನೀವು ಎರಡು ಮೂರು ದಿವಸ ಹಿಂದೆ ತಾವು ಸಾರ್ವಜನಿಕ ಸಭೆಯಲ್ಲಿ ಹರಿದ ಕುರ್ತಾ ಪ್ರದರ್ಶಿಸಿದ್ದೀರಿ. ನಿಮ್ಮ ಸರಳತನಕ್ಕೆ ಹೆಮ್ಮೆ ಇದೆ. ಜೊತೆಗೆ ದುಃಖವೂ ಆಗಿದೆ. ಆದ್ದರಿಂದ ನೀವು ನಿಮ್ಮ ಹರಿದ ಕುರ್ತಾವನ್ನು ರಿಪೇರಿ ಮಾಡಿಸಿಕೊಳ್ಳಲಿಕ್ಕಾಗಿ ನೂರು ರೂಪಾಯಿ ಕಳುಹಿಸುತ್ತಿದ್ದೇನೆ. ನೀವು ನನ್ನ ಸಣ್ಣ ಕೊಡುಗೆ ಸ್ವೀಕರಿಸುವಿರಿ ಎಂದು ನಂಬಿದ್ದೇನೆ. ಮತ್ತು ನೀವು ನಿಮ್ಮ ಕುರ್ತಾವನ್ನು ಹೊಲಿಸಿಕೊಳ್ಳಿರಿ.
ರಾಹುಲ್‌ಗಾಂಧಿ ಋಷಿಕೇಷದ ಸಾರ್ವಜನಿಕ ಸಭೆಯೊಂದರಲ್ಲಿ ಮೋದಿಯ ಇಮೇಜ್ ಮತ್ತು ಕೆಲಸದ ವ್ಯತ್ಯಾಸವನ್ನು ತೋರಿಸುತ್ತಾ ಹದಿನೈದು ಲಕ್ಷದ ಸೂಟ್ ಮತ್ತು ಚರಕದ ಅರ್ಥವೇನು ಎಂದು ಪ್ರಶ್ನಿಸಿದ್ದರು. ಚರಕ ಬಡವರನ್ನು ಪ್ರತಿನಿಧಿಸುತ್ತದೆ. ಅವರ ಬೆವರು ಪರಿಶ್ರಮವನ್ನು ಪ್ರತಿನಿಧಿಸುತ್ತದೆ ಎನ್ನುತ್ತಾ ರಾಹುಲ್ ತನ್ನ ಹರಿದ ಕುರ್ತಾವನ್ನು ಸಭೆಯ ಮುಂದೆ ತೋರಿಸಿದ್ದರು. ಕುರ್ತಾದ ಜೇಬು ಹರಿದಿದ್ದರೂ ನನಗೆ ಅದು ದೊಡ್ಡ ವಿಷಯವಲ್ಲ. ಆದರೆ ಮೋದಿಯ ಬಟ್ಟೆ ಎಂದೂ ಹರಿದಿಲ್ಲ ಮತ್ತು ಅವರು ಬಡವರ ರಾಜಕೀಯ ನಡೆಸುತ್ತಿದ್ದಾರೆಂದು ಪ್ರಧಾನಿ ಮೋದಿಯನ್ನು ಛೇಡಿಸಿದ್ದರು. ಎಂದು ವರದಿತಿಳಿಸಿದೆ.