ಉತ್ತರ ಪ್ರದೇಶದಲ್ಲಿ ಮಾಹಾಮೈತ್ರಿಯಿಂದ ಆರ್ ಎಲ್ ಡಿ ಹೊರಕ್ಕೆ
Update: 2017-01-20 10:46 IST
ಲಕ್ನೋ, ಜ.20: ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಸಮಾಜವಾದಿ-ಕಾಂಗ್ರೆಸ್ ಪಕ್ಷದೊಂದಿಗೆ ಮಹಾಮೈತ್ರಿ ಮಾಡಿಕೊಳ್ಳುವ ನಿರ್ಧಾರದಿಂದ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳ( ಆರ್ ಎಲ್ಡಿ) ಹೊರಬಂದಿದೆ.
ಆರ್ ಎಲ್ ಡಿ ಒಟ್ಟು 120 ಸೀಟ್ ಗಳಿಗೆ ಬೇಡಿಕೆ ಸಲ್ಲಿಸಿತ್ತು. ಆದರೆ 24 ಸೀಟ್ ಗಳನ್ನು ಬಿಟ್ಟುಕೊಡಲು ಸಮಾಜವಾದಿ ಪಕ್ಷ ಒಪ್ಪಿದೆ. ಅದೂ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ನೀಡಲಾದ 103 ಸೀಟ್ ಗಳಲ್ಲಿ ಆರ್ ಎಲ್ ಡಿಗೆ 24 ಸ್ಥಾನ ಬಿಟ್ಟು ಕೊಡುವುದಾಗಿ ಹೇಳಿದೆ. ಇದರಿಂದ ಅಸಮಾಧಾನಗೊಂಡಿರುವ ಆರ್ ಎಲ್ ಡಿ ಮಹಾಮೈತ್ರಿಯಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.