Coffee With D ಚಿತ್ರ ವಿಮರ್ಶೆ : ಸುನಿಲ್ ಗ್ರೋವರ್ ರ ಹಾಸ್ಯ ಪ್ರಧಾನ ಚಿತ್ರ ನಿರೀಕ್ಷೆಗೆ ತಕ್ಕಂತೆ ಬಂದಿದೆಯೇ ?

Update: 2017-01-20 09:11 GMT

ಮುಂಬೈ,ಜ.20 : ಸೋನಿ ಟಿವಿಯ ಜನಪ್ರಿಯ ದಿ ಕಪಿಲ್ ಶರ್ಮ ಶೋ ದಲ್ಲಿ ಡಾ ಮಶೂರ್ ಗುಲಾಟಿ ಪಾತ್ರಧಾರಿಯಾಗಿ ಎಲ್ಲರ ಗಮನ ಸೆಳೆದಿರುವ ಸುನಿಲ್ ಗ್ರೋವರ್ ಅಭಿನಯದ ‘ಕಾಫಿ ವಿದ್ ಡಿ’ ಚಿತ್ರ ಬಿಡುಗಡೆಯಾಗಿದೆ. ಚಿತ್ರ ಬಹು ನಿರೀಕ್ಷೆಗಳನ್ನು ಮೂಡಿಸಿತ್ತು. ಅದರ ಟ್ರೇಲರ್ ಕೂಡ ಸಾಕಷ್ಟು ಕುತೂಹಲ ಕೆರಳಿಸಿತ್ತಾದರೂ ಎರಡು ಗಂಟೆ ಅವಧಿಯ ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡುವುದರಲ್ಲಿ ಅಷ್ಟೊಂದು ಮಜಾ ಕಾಣುತ್ತಿಲ್ಲ.

ಈ ಚಿತ್ರದ ನಟರ ಅಭಿನಯದ ಬಗ್ಗೆ ಹೇಳುವುದಾದರೆ ಡಾನ್ ಪಾತ್ರಧಾರಿ ಝಾಕಿರ್ ಹುಸೈನ್ ಅವರ ಅಭಿನಯ ಸಾಕಷ್ಟು ಪ್ರಭಾವಶಾಲಿಯಾಗಿದೆ. ಅತ್ತ ಸುನಿಲ್ ಗ್ರೋವರ್ ಅವರು ಈ ಚಿತ್ರದಲ್ಲಿ ಪತ್ರಕರ್ತರೊಬ್ಬರ ಪಾತ್ರ ನಿರ್ವಹಿಸುತ್ತಿದ್ದು ಚಿತ್ರದಲ್ಲಿ ಅವರ ಹೆಸರು ಅರ್ನಬ್ ಘೋಷ್ ಆಗಿದೆ. ಈ ಪಾತ್ರದ ಮೂಲಕ ಅವರು ಟೈಮ್ಸ್ ನೌ ಮಾಜಿ ಮುಖ್ಯ ಸಂಪಾದಕ ಹಾಗೂ ಆಂಕರ್ ಅರ್ನಬ್ ಗೋಸ್ವಾಮಿಯ ಚಿತ್ರಣವನ್ನು ತೆರೆ ಮೇಲೆ ತರಲು ಯತ್ನಿಸುತಿದ್ದಾರೇನೋ ಎಂಬಂತೆ ಭಾಸವಾಗುತ್ತಿದೆ. ಚಿತ್ರದಲ್ಲಿ ಅವರ ಪತ್ನಿಯಾಗಿ ಅಂಜನಾ ಸುಖಾನಿ ಅಭಿನಯಿಸಿದ್ದು ಚಿತ್ರದಲ್ಲಿ ಅವರನ್ನುಗರ್ಭಿಣಿಯನ್ನಾಗಿ ತೋರಿಸಲಾಗಿದೆ.

ಚಿತ್ರ ಕಥೆ ಹೀಗಿದೆ. ಮುಂಬೈಯ ಟಿವಿ ಚಾನೆಲ್ ಒಂದರಲ್ಲಿ ಪ್ರೈಮ್ ಟೈಮ್ ನ್ಯೂಸ್ ಆಂಕರ್ ಆಗಿ ಅರ್ನಬ್ ಘೋಷ್ ಇದ್ದರೆ ಈ ಚಾನೆಲ್ಲಿನ ಟಿಆರ್‌ಪಿ ಕುಸಿಯುತ್ತಿರುವುದನ್ನು ಗಮನಿಸಿದ ಅದರ ಮಾಲಕ ರಾಯ್ (ರಾಜೇಶ್ ಶರ್ಮ) ಅರ್ನಬ್ ಗೆ ಟಿಆರ್‌ಪಿ ಹೆಚ್ಚಿಸಲು ಎರಡು ತಿಂಗಳು ಗಡುವು ನೀಡುತ್ತಾನೆ.ಈ ವಿಷಯವನ್ನು ಅರ್ನಬ್ ಮನೆಯಲ್ಲಿ ತನ್ನ ಪತ್ನಿಯ ಬಳಿ ಪ್ರಸ್ತಾಪಿಸಿದಾಗ ಆಕೆ ಡಾನ್ ಡಿ ಸಂದರ್ಶನವನ್ನುಚಾನೆಲ್ಲಿನಲ್ಲಿ ಪ್ರಸಾರ ಮಾಡಿದರೆ ಅದರ ಟಿ ಆರ್ ಪಿ ಹೆಚ್ಚಬಹುದೆಂಬ ಸಲಹೆ ನೀಡುತ್ತಾಳೆ. ಅರ್ನಬ್ ಇದ್ನು ತನ್ನ ಬಾಸ್ ಬಳಿ ಹೇಳುತ್ತಾನೆ. ನಂತರ ಚಿತ್ರ ಹಲವು ಟ್ವಿಸ್ಟ್ ಎಂಡ್ ಟರ್ನ್ ಗಳನ್ನು ಪಡೆದು ಕೊನೆಗೆ ಅರ್ನಬ್ ಡಾನ್ ಸಂದರ್ಶನ ಪಡೆಯುವಲ್ಲಿ ಸಫಲನಾಗುತ್ತಾನೆ.

ಚಿತ್ರದ ಸ್ಕ್ರಿಪ್ಟ್ ಅಷ್ಟೊಂದು ಗಮನಾರ್ಹವಾಗಿ ಮೂಡಿ ಬಂದಿಲ್ಲವಾದ ಕಾರಣ ಚಿತ್ರವೂ ಪ್ರೇಕ್ಷಕರ ಮನ ತಟ್ಟಲು ಸಫಲವಾಗಿಲ್ಲ. ಮೇಲಾಗಿ ಚಿತ್ರದ ಹಲವೆಡೆ ಸೆನ್ಸಾರ್ ಮಂಡಳಿಯ ಕತ್ತರಿ ಪ್ರಯೋಗ ನಡೆದಿರುವುದೂ ಸ್ಪಷ್ಟವಾಗಿದೆ. ಡಬ್ಬಿಂಗ್ ಕೂಡ ಅಷ್ಟೊಂದು ಚೆನ್ನಾಗಿ ಮೂಡಿ ಬಂದಿಲ್ಲ.ಉತ್ತಮ ಕಲಾವಿದರು ಹೊಂದಿದ ಚಿತ್ರವಾದರೂ ಪ್ರೇಕ್ಷಕರನ್ನು ಇಂಪ್ರೆಸ್ ಮಾಡಲು ಚಿತ್ರ ವಿಫಲವಾಗಿದೆ ಎಂದೇ ಹೇಳಬಹುದು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News