×
Ad

​ಪ್ರಧಾನಿ ಪದವಿ ವಿವಾದ : ಮಾಹಿತಿ ಆಯುಕ್ತ ಆಚಾರ್ಯುಲು ಬೆಂಬಲಕ್ಕೆ ನಿಂತ ಆರ್ ಟಿ ಐ ಕಾರ್ಯಕರ್ತರು

Update: 2017-01-20 15:09 IST

ಹೊಸದಲ್ಲಿ,ಜ.20: ಪ್ರಧಾನಿ ನರೇಂದ್ರ ಮೋದಿ ತಮ್ಮ ಪದವಿ ಪಡೆದಿದ್ದಾರೆನ್ನಲಾದ ವರ್ಷವಾದ 1978ರ ದೆಹಲಿ ವಿಶ್ವವಿದ್ಯಾಲಯದ ಎಲ್ಲಾ ಪದವಿ ದಾಖಲೆಗಳನ್ನು ಬಹಿರಂಗಪಡಿಸಬೇಕೆಂದು ಇತ್ತೀಚೆಗೆ ಆದೇಶ ನೀಡಿದ್ದ ಕೇಂದ್ರ ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು ಅವರನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಗಳಿಂದ ಹೊರಗಿಟ್ಟಿರುವ ಬಗ್ಗೆತಮ್ಮ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹಲವು ಆರ್ ಟಿ ಐ ಕಾರ್ಯಕರ್ತರು ಈ ಕ್ರಮದ ಹಿಂದಿನ ಕಾರಣ ಬಹಿರಂಗಪಡಿಸಬೇಕೆಂದು ಮುಖ್ಯ ಮಾಹಿತಿ ಆಯುಕ್ತ ಆರ್.ಕೆ ಮಾಥುರ್ ಅವರನ್ನು ಕೋರಿದ್ದಾರೆ.
ಈ ಬಗ್ಗೆ ಮಾಥುರ್ ಅವರಿಗೆ ಪತ್ರ ಬರೆದಿರುವ ಆರ್ ಟಿಐ ಕಾರ್ಯಕರ್ತರು, ಆಯೋಗದ ಕ್ರಮ ರಾಜಕೀಯ ಹಸ್ತಕ್ಷೇಪದಿಂದ ನಡೆದಿದೆ ಎಂಬುದು ವ್ಯಾಪಕವಾದ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ.

ಡಿಸೆಂಬರ್ 29, 2016ರಂದು ಆಚಾರ್ಯುಲು ಅವರಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ಪ್ರಕರಣಗಳ ವಿಚಾರಣೆಗೆ ಅನುಮತಿಸಿದ್ದ ಆಯೋಗ ಇದೀಗ ಅವರಿಂದ ಈ ಅಧಿಕಾರ ಕಿತ್ತುಕೊಂಡಿರುವುದರ ಹಿಂದಿನ ಮರ್ಮವನ್ನು ಆರ್ ಟಿಐ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಆರ್ ಟಿಐ ಕಾಯ್ದೆಯ ಸೆಕ್ಷನ್ 4 ಕೂಡ ಈ ಬಗೆಗಿನ ಮಾಹಿತಿಯನ್ನು ಬಹಿರಂಗ ಪಡಿಸಬೇಕೆಂದು ಹೇಳುತ್ತದೆ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News