100 ಕೋಟಿ ರೂ. ಗೆದ್ದ ಭೈರವ

Update: 2017-01-20 13:37 GMT

ಪೊಂಗಲ್ ಹಬ್ಬಕ್ಕೆ ಬಿಡುಗಡೆಯಾದ ಇಳಯ ದಳಪತಿ ವಿಜಯ್ ಅಭಿನಯದ ತಮಿಳು ಚಿತ್ರ ‘ಭೈರವ ’ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ. ತೆರೆಕಂಡ ನಾಲ್ಕೆ ದಿನಗಳಲ್ಲಿ 100 ಕೋಟಿ ರೂ.ಗಳಿಸಿರುವ ಈ ಚಿತ್ರದ ವಿದೇಶಗಳಲ್ಲಿಯೂ ಭರ್ಜರಿ ಗಳಿಕೆ ಮಾಡುತ್ತಿದೆ. 

ತಮಿಳುನಾಡಿನಲ್ಲಿ ಮೊದಲ ದಿನವೇ 16.1 ಕೋಟಿ ರೂ. ಸಂಪಾದಿಸಿರುವ ‘ಭೈರವ ’, ನೆರೆಯ ರಾಜ್ಯಗಳಾದ ಆಂಧ್ರ, ಕೇರಳಗಳಲ್ಲಿಯೂ ಜಯಭೇರಿ ಬಾರಿಸಿದೆ. ಮಲೇಶ್ಯ, ಅಮೆರಿಕಗಳಲ್ಲಿಯೂ ‘ಭೈರವ ’ ಭರ್ಜರಿ ಪ್ರದರ್ಶನ ಕಾಣುತ್ತಿದ್ದಾನೆ.

ವಿಜಯ್ ಸ್ವಂತ ಬ್ಯಾನರ್‌ನಲ್ಲಿ ನಿರ್ಮಿಸಿರುವ ಈ ಚಿತ್ರದ ಗೆಲುವಿನ ನಾಗಾಲೋಟ ಎಗ್ಗಿಲ್ಲದೆ ಸಾಗುವ ನಿರೀಕ್ಷೆಯಿದೆ. ಹಾಗೆ ನೋಡಿದರೆ ಇತ್ತೀಚಿನ ವರ್ಷಗಳಲ್ಲಿ ವಿಜಯ್ ಅಭಿನಯದ ಚಿತ್ರಗಳು ಸಾಲುಸಾಲಾಗಿ ಹಿಟ್ ಆಗಿವೆ.

ಈ ನಟನ ಹಿಂದಿನ ಚಿತ್ರ ಥೇರಿ ಕೂಡಾ 100 ಕೋಟಿ ರೂ. ಕ್ಲಬ್ ಪ್ರವೇಶಿಸುವಲ್ಲಿ ಸಫಲವಾಗಿತ್ತು. ಬಹುಭಾಷಾ ನಟಿ ಕೀರ್ತಿ ಸುರೇಶ್ ನಾಯಕಿಯಾಗಿರುವ ಈ ಚಿತ್ರದಲ್ಲಿ ತೆಲುಗಿನ ಖ್ಯಾತ ನಟ ಜಗಪತಿ ಬಾಬು ಕೂಡಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News