ಸಲ್ಮಾನ್ಈಗ ಡ್ಯಾನ್ಸರ್

Update: 2017-01-20 13:43 GMT

ಮಸಲ್‌ಮ್ಯಾನ್ ಪಾತ್ರಗಳಿಂದಲೇ ಬಾಲಿವುಡ್‌ನ ನಂ.1 ಪಟ್ಟಕ್ಕೇರಿರುವ ಸಲ್ಮಾನ್ ಖಾನ್ ಈಗ ‘ಡ್ಯಾನ್ಸರ್’ ಆಗಿ ಬಾಲಿವುಡ್ ಪ್ರೇಮಿಗಳ ಮನಸೂರೆಗೊಳ್ಳಲು ಹೊರಟಿದ್ದಾರೆ. ಹೌದು. ಖ್ಯಾತ ಕೊರಿಯೋಗ್ರಾಫರ್ ಹಾಗೂ ನಿರ್ದೇಶಕ ರೆಮೋ ಡಿಸೋಝಾ ಅವರ ಚಿತ್ರದಲ್ಲಿ ಸಲ್ಮಾನ್ ಖಾನ್ ಮಧ್ಯವಯಸ್ಸಿನ ನೃತ್ಯಪಟುವಾಗಿ ಕಾಣಿಸಿಕೊಳ್ಳಲಿದ್ದಾರೆ. 13 ವರ್ಷದ ಬಾಲಕಿಯ ತಂದೆಯಾಗಿ ಕಾಣಿಸಿಕೊಳ್ಳಲಿರುವ ಸಲ್ಮಾನ್‌ಗೆ ಈ ಚಿತ್ರದ ಪಾತ್ರ ಅತ್ಯಂತ ಚ್ಯಾಲೆಜಿಂಗ್ ಆಗಿದೆಯಂತೆ.

ನಾಯಕಿಯಾಗಿ ದೀಪಿಕಾ ಪಡುಕೋಣೆಯನ್ನು ಆಯ್ಕೆ ಮಾಡಲು ರೆಮೋ ಯೋಚಿಸುತ್ತಿದ್ದಾರೆ. ಈ ಬಗ್ಗೆ ಮಾತುಕತೆ ಕೂಡಾ ನಡೆದಿದೆ. ಚಿತ್ರಕಥೆಯನ್ನು ರೆಮೋ ಈಗಾಗಲೇ ಪೂರ್ಣಗೊಳಿಸಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭಿಸಲಿದ್ದಾರೆ. 2011ರಲ್ಲಿ ತೆರೆಕಂಡ ಅರ್ಶದ್ ವಾರ್ಸಿ, ರಿತೇಶ್ ದೇಶ್‌ಮುಖ ಅಭಿನಯದ ‘ಫಾಲ್ತೂ’ ಚಿತ್ರದ ಮೂಲಕ ನಿರ್ದೇಶಕನ ಪಟ್ಟವನ್ನು ಅಲಂಕರಿಸಿದ ರೆಮೋ ಎಬಿಸಿಡಿ ಸರಣಿಯ ಚಿತ್ರಗಳಿಂದ ಜನಪ್ರಿಯತೆ ಪಡೆದರು. ಆದರೆ ಇತ್ತೀಚೆಗೆ ಬಿಡುಗಡೆಯಾದ ಅವರ ನಿರ್ದೇಶನದ ‘ಫ್ಲೈಯಿಂಗ್ ಜಾಟ್ ಬಾಕ್ಸ್’ ಆಫೀಸ್‌ನಲ್ಲಿ ಮಖಾಡೆ ಮಲಗಿತ್ತು.

 ಸದ್ಯ ಸಲ್ಮಾನ್ ‘ಟ್ಯೂಬ್‌ಲೈಟ್’ ಹಾಗೂ ‘ಟೈಗರ್ ಜಿಂದಾ ಹೋ’ ಚಿತ್ರದ ಶೂಟಿಂಗ್‌ನಲ್ಲಿ ಮಗ್ನರಾಗಿದ್ದು ಅದು ಪೂರ್ಣಗೊಳ್ಳುತ್ತಿದ್ದಂತೆ ರೆಮೋ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಇತ್ತ ದೀಪಿಕಾ, ಇರಾನಿ ನಿರ್ದೇಶಕ ಮಜೀದ್ ಮಜಿದಿಯವರ ‘ಕಾಶ್ಮೀರಿ ಎಫ್ಲೋಟ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News