ಉಲ್ಫಾ ಮುಖ್ಯಸ್ಥ ಬರುವಾನ ನಿಕಟವರ್ತಿ ಎನ್‌ಐಎ ವಶಕ್ಕೆ
Update: 2017-01-20 23:05 IST
ಹೊಸದಿಲ್ಲಿ,ಜ.20: ನಿಷೇಧಿತ ಉಗ್ರಗಾಮಿ ಸಂಘಟನೆ ಉಲ್ಫಾದ ಹಿರಿಯ ಕಮಾಂಡರ್ ಗಗನ್ ಹಝಾರಿಕಾ ಅಲಿಯಾಸ್ ಜಯದೀಪ್ ಚೀಲೆಂಗ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ಇಂದು ಬಂಧಿಸಿದೆ.
ಅಸ್ಸಾಂ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಹಝಾರಿಕಾನನ್ನು ಗುವಾಹಟಿಯಲ್ಲಿನ ವಿಶೇಷ ಎನ್‌ಐಎ ನ್ಯಾಯಾಲಯದ ಮೂಲಕ ಆರು ದಿನಗಳ ಅವಧಿಗೆ ತನ್ನ ವಶಕ್ಕೆ ಎನ್‌ಐಎ ಪಡೆದುಕೊಂಡಿದೆ. ಈತ ಉಲ್ಫಾಧ ಅಧ್ಯಕ್ಷ ಮುಕುಲ್ ಹಝಾರಿಕಾ ಮತ್ತು ಕಮಾಂಡರ್ ಇನ್ ಚೀಫ್ ಪರೇಶ್ ಬರುವಾ ಸೇರಿದಂತೆ ಹಿರಿಯ ನಾಯಕರ ಚಟುವಟಿಕೆಗಳ ಮೇಲೆ ಬೆಳಕು ಬೀರುವ ಸಾಧ್ಯತೆಯಿದೆ ಎಂದು ಎನ್‌ಐಎ ತಿಳಿಸಿದೆ.
ಹಝಾರಿಕಾ ಮ್ಯಾನ್ಮಾರ್‌ನ ಶಿಬಿರಗಳಲ್ಲಿ ಈ ನಾಯಕರ ನಿಕಟವರ್ತಿಯಾಗಿದ್ದ.