ಝಾಕಿರ್ ನಾಯ್ಕ್ ಗೆ ಸಮನ್ಸ್
ಮುಂಬೈ,ಜ.21: ಕಪ್ಪುಹಣ ಬಿಳಿ ಮಾಡಿದ ಆರೋಪದಲ್ಲಿ ಇಸ್ಲಾಮಿ ವಿದ್ವಾಂಸ ಡಾ.ಝಾಕಿರ್ ನಾಯ್ಕ್ ಗೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ಹೊರಡಿಸಿದೆ. ತಿಂಗಳ ಕೊನೆಯಲ್ಲಿ ಹೇಳಿಕೆ ಪಡೆಯಲು ಹಾಜರಾಗಬೇಕು ಎಂದು ಶುಕ್ರವಾರ ಇಡಿ ಸಮನ್ಸ್ ಕಳುಹಿಸಿದೆ. ಝಾಕಿರ್ ನಾಯ್ಕ್, ಅವರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಮುಖ್ಯಸ್ಥರಿಗೂ ಸಮನ್ಸ್ ಕಳುಹಿಸಲಾಗಿದೆ.
ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ನೀಡಿದ ಮಾಹಿತಿ ಆಧಾರದಲ್ಲಿ ಕಳೆದ ತಿಂಗಳು ಝಾಕಿರ್ ನಾಯ್ಕ್ ವಿರುದ್ಧ ಕಪ್ಪು ಹಣ ಬಿಳಿಮಾಡುವುದನ್ನು ತಡೆಯುವ(ಪಿಎಂಎಲ್‌ಎ)ಆಕ್ಟ್ ಪ್ರಕಾರ ಇಡಿ ಕೇಸು ದಾಖಲಿಸಿದೆ. ಅನುಮಾನಾಸ್ಪದ ಬ್ಯಾಂಕ್ ವ್ಯವಹಾರಗಳನ್ನು ಪತ್ತೆಹಚ್ಚಲಿಕ್ಕಾಗಿ ಝಾಕಿರ್ ನಾಯ್ಕ್ ರನ್ನು ತನಿಖೆಗೆ ಗುರಿಪಡಿಸಲು ನಿರ್ಧರಿಸಲಾಗಿದೆ. ಝಾಕಿರ್ ನಾಯ್ಕ್ ಮತ್ತು ಸಂಬಂಧಿಕರ ಹೆಸರಿನಲ್ಲಿ 78 ಬ್ಯಾಂಕ್ ಖಾತೆಗಳ ಬಗ್ಗೆ ಮತ್ತು ನೂರು ಕೋಟಿ ರೂಪಾಯಿ ಠೇವಣಿಯ ಕುರಿತು ತನಿಖೆಯನ್ನು ಇಡಿ ತನಿಖೆ ನಡೆಸುತ್ತಿದೆ. ಝಾಕಿರ್ ನಾಯ್ಕ್ ಸದ್ಯ ಸೌದಿಅರೇಬಿಯದಲ್ಲಿದ್ದು, ಇದೇ ಮೊದಲಬಾರಿ ಅವರಿಗೆ ಸಮನ್ಸ್ ಕಳುಹಿಸಲಾಗಿದೆ.
ಈಹಿಂದೆ ಯುಎಪಿಎ ಆ್ಯಕ್ಟ್ ಪ್ರಕಾರ ಝಾಕಿರ್ ನಾಯ್ಕ್ ರ ವಿರುದ್ಧ ಕೇಸುದಾಖಲಿಸಿ ಎನ್‌ಐಎ ಇಸ್ಲಾಮಿಕ್ ರಿಸರ್ಚ್‌ಫೌಂಡೇಶನನ್ನು ನಿಷೇಧಿಸಿದೆ ಎಂದು ವರದಿ ತಿಳಿಸಿದೆ.