‘ರಯೀಸ್ ’ಪ್ರಚಾರಕ್ಕಾಗಿ ರೈಲಿನಲ್ಲಿ ಶಾರುಕ್ ಪ್ರಯಾಣ

Update: 2017-01-21 15:59 GMT

ಮುಂಬೈ,ಜ.21: ಬಾಲಿವುಡ್ ಸೂಪರ್‌ಸ್ಟಾರ್ ಶಾರುಕ್ ಖಾನ್ ಅವರು ತನ್ನ ಮುಂಬರುವ ಚಿತ್ರ ‘ರಯೀಸ್ ’ನ ಪ್ರಚಾರಕ್ಕಾಗಿ ಮುಂಬೈನಿಂದ ದಿಲ್ಲಿಗೆ ಪ್ರಯಾಣಿಸ ಲಿದ್ದಾರೆ. ರಾಹುಲ್ ಧೋಲಾಕಿಯಾ ನಿರ್ದೇಶನದ ಈ ಚಿತ್ರದಲ್ಲಿ ಶಾರುಕ್ ಅಕ್ರಮ ಮದ್ಯ ಮಾರಾಟಗಾರನ ಪಾತ್ರ ನಿರ್ವಹಿಸಿದ್ದಾರೆ.

ಶಾರುಕ್ ಜೊತೆ ಚಿತ್ರದ ನಿರ್ಮಾಪಕ ರಿತೇಶ ಸಿಧ್ವಾನಿ ಮತ್ತು ಚಿತ್ರತಂಡದ ಇತರ ಸದಸ್ಯರು ಸೋಮವಾರ ಆಗಸ್ಟ್ ಕ್ರಾಂತಿ ರಾಜಧಾನಿ ಎಕ್ಸಪ್ರೆಸ್ ಹತ್ತಲಿದ್ದಾರೆ. ಸಹ ಪ್ರಯಣಿಕರಲ್ಲಿ ಚಿತ್ರದ ಪ್ರಚಾರವನ್ನು ಮಾಡುವುದು ಈ ಪ್ರಯಾಣದ ಉದ್ದೇಶವಾಗಿದೆ.
ಅಂಧೇರಿ,ಬೋರಿವಲಿ,ವಾಪಿ,ವಲ್ಸಾಡ್,ಸೂರತ್,ಬರೋಡಾ,ರತ್ಲಾಂ,ಕೋಟಾ,ಸವಾಯಿ ಮಾಧೋಪುರ ಮತ್ತು ಮಥುರಾಗಳಲ್ಲಿ ಈ ರೈಲು ನಿಲ್ಲಲಿದೆ.

ನವಾಝುದ್ದೀನ್ ಸಿದ್ದಿಕಿ ಮತ್ತು ಪಾಕಿಸ್ತಾನಿ ನಟಿ ಮಹಿರಾ ಖಾನ್ ಅವರೂ ‘ರಯೀಸ್ ’ನಲ್ಲಿ ನಟಿಸಿದ್ದು, ಜ.25ರಂದು ಚಿತ್ರವು ಬಿಡುಗಡೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News