ವ್ಯಕ್ತಿಯನ್ನು ಬಲಿ ಪಡೆದ ರಿಕ್ಷಾ
Update: 2017-01-22 21:11 IST
ಹೈದರಾಬಾದ್,ಜ.22: ಹಳೆಯ ಹೈದರಾಬಾದ್ ನಗರದ ಶಾಶೇರ್‌ಗಂಜ್ ಪ್ರದೇಶದಲ್ಲಿ ರವಿವಾರ ನಡೆದ ವಿಲಕ್ಷಣ ಅಪಘಾತದಲ್ಲಿ ಕಾರ್ಮಿಕನೋರ್ವ ಸಾವನ್ನಪ್ಪಿದ್ದಾನೆ.
ಜಂಗಯ್ಯ(45) ರಸ್ತೆಯನ್ನು ದಾಟುತ್ತಿದ್ದ ಸಂದರ್ಭ ಮೇಲಕ್ಕೆ ಎಗರಿದ ರಿಕ್ಷಾದ ಮುಂಭಾಗ ಆತನ ಮೇಲೆಯೇ ಅಪ್ಪಳಿಸಿದ್ದು ಮುಂದಿನ ಚಕ್ರ ಕಳಚಿ ಬಿದ್ದಿದೆ. ರಿಕ್ಷಾ ಆತನನ್ನು ತಳ್ಳಿಕೊಂಡೇ ಸ್ವಲ್ಪ ದೂರ ಸಾಗಿದ್ದು ಸ್ಥಳದಲ್ಲಿಯೇ ಮೃತನಾಗಿದ್ದಾನೆ.ರಿಕ್ಷಾ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.